ರಸ್ತೆ ಬಿರುಕು - ಸಂಪರ್ಕ ಕಡಿತದ ಆತಂಕ

PTR_16 JUNE_4
Published on

ಸಂಪಾಜೆ: ಮಾಣಿ ಮೈಸೂರು ಹೆದ್ದಾರಿಯ ಕೊಯನಾಡು ಎಂಬಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿತದ ಭೀತಿ ಎದುರಾಗಿದೆ.

ಕೊಯನಾಡು ಅರಣ್ಯ ಇಲಾಖೆಯ ಮರದ ಡಿಪೋ ಸಮೀಪದಲ್ಲಿ ಕಳೆದ ವರ್ಷವೇ ಹೆದ್ದಾರಿಯಲ್ಲಿ ಬಿರುಕಾಣಿಸಿಕೊಂಡಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆ ಬಿರುಕು ಇನ್ನಷ್ಟು ಹೆಚ್ಚಾಗಿದೆ. ರಸ್ತೆ ಕುಸಿತದ ಆತಂಕ ಎದುರಾಗಿದ್ದು, ಮಂಗಳೂರು - ಮಡಿಕೇರಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಗುಡ್ಡೆ ಕುಸಿತದ ಪರಿಣಾಮ ೫ ವರ್ಷದ ಹಿಂದೆ ರಸ್ತೆ ಸಂಪರ್ಕ ಸಂಪರ್ಕ ಕಳೆದುಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net