

ಮಂಗಳೂರು: ನಗರದ ಬಿಕರ್ನಕಟ್ಟೆ ಮೇಲ್ಸೇತುವೆಯ ಸರ್ವೀಸ್ ರಸ್ತೆಗೆ ಹೊಂಡ ಗುಂಡಿಗಳಿಂದ ಕೂಡಿದ್ದು, ಹಲವು ಸಮಯದಿಂದ ದುರಸ್ತಿಯಾಗಿಲ್ಲ. ಸ್ಥಳೀಯರು ಹಲವು ಬಾರಿ ಸಂಸದರು, ಶಾಸಕರು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ.
ಇದೀಗ ಹೋರಾಟದ ಮುಂದಿನ ಭಾಗವಾಗಿ ಸ್ಥಳೀಯರು, ಸೋಮವಾರ ಸ್ಥಳದಲ್ಲಿ ಫ್ಲೆಕ್ಸ್ ಅಳವಡಿಸಿ, ಕಾಣಿಕೆ ಡಬ್ಬಿಯೊಂದನ್ನು ಇಟ್ಟಿದ್ದಾರೆ. ಫ್ಲೆಕ್ಸ್‌ನಲ್ಲಿ ‘ ಈ ರಸ್ತೆ ಸರಿಪಡಿಸಲು ಕಾಣಿಕೆ ಡಬ್ಬಿ- ಇಲ್ಲಿ ಒಟ್ಟಾದ ಹಣವನ್ನು ಈ ರಸ್ತೆ ಸರಿಪಡಿಸಲು ನಮ್ಮ ಜನಪ್ರತಿನಿಧಿಗಳಿಗೆ ನೀಡಲಾಗುವುದು’ ಎಂದು ಬರೆಯಲಾಗಿದೆ. ಈ ಕುರಿತ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ವೀಸ್ ರಸ್ತೆ ದುರಸ್ತಿಗೆ ಮುಂದಾಗದ ಜನ ಪ್ರತಿನಿಧಿಗಳ ಕಾರ್ಯವೈಖರಿಗೆ ಖಂಡನೆ ವ್ಯಕ್ತವಾಗಿದೆ.