

ಪುರುಷೋತ್ತಮ ಪೆರ್ಲ ಕಾಸರಗೋಡು
ಜಿಲ್ಲೆಯ ಚೆರ್ಕಳ - ಕಾಸರಗೋಡು ರಸ್ತೆಯಲ್ಲಿ ನಿರಂತರ, ಕಾನೂನು ಮೀರಿದ ಮಿತಿಯಲ್ಲಿ ಸಾಮಗ್ರಿ ಹೇರಿಕೊಂಡು ಸಂಚರಿಸುತ್ತಿರುವ ಭಾರಿ ವಾಹನಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಿಗದಿಗಿಂತ ಹೆಚ್ಚಿನ ಭಾರ ಹೇರಿಕೊಂಡು ಲಾರಿಗಳು ಸಂಚಾರ ನಡೆಸುತ್ತಿರುವುದರಿಂದ ಅಂತಾರಾಜ್ಯ ಸಂಪರ್ಕದ ಚೆರ್ಕಳ - ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕವರೆಗೂ ಅಯೋಮಯವಾಗಿದೆ.
ರಾಷ್ಟ್ರೀಯ ಹೆದ್ದಾರಿ, ಬಂದರು ಜೆಟ್ಟಿ ನಿರ್ಮಾಣ ಮುಂತಾದ ಹೆಸರಲ್ಲಿ ಕರ್ನಾಟಕದಿಂದ ಕೇರಳದ ವಿವಿಧ ಪ್ರದೇಶಗಳಿಗೆ ವ್ಯಾಪಕವಾಗಿ ಕರ್ಗಲ್ಲು, ಜಲ್ಲಿಕಲ್ಲು, ಎಂ ಸ್ಯಾಂಡ್ ಸೇರಿ ನೂರಾರು ಲೋಡು ಖನಿಜ ದಿನವೊಂದಕ್ಕೆ ರವಾನೆಯಾಗುತ್ತಿದೆ. ಪುತ್ತೂರು, ಬಂಟ್ವಾಳ ತಾಲೂಕಿನ ವಿವಿಧ ಕರ್ಗಲ್ಲು ಕ್ವಾರಿಗಳಿಂದ ಈ ಜಲ್ಲಿಕಲ್ಲು ರವಾನೆಯಾಗುತ್ತಿದೆ. 10ರಿಂದ 12ಚಕ್ರಗಳ ಬೃಹತ್ ಗಾತ್ರದ ಟೋರಸ್ ಲಾರಿಗಳು ಒಳಗೊಂಡಂತೆ ದಿನವೊಂದಕ್ಕೆ 50ಕ್ಕೂ ಮಿಕ್ಕಿದ ಲಾರಿಗಳು ತಲಾ ಮೂರರಿಂದ ನಾಲ್ಕು ಬಾರಿ ಸರ್ವೀಸ್ ನಡೆಸುತ್ತಿವೆ.
ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಿಗೂ ಸಂಕಷ್ಟ
ಅತಿಯಾದ ಭಾರದೊಂದಿಗೆ ನಿರಂತರವಾಗಿ ಸಾಗುವ ಭಾರಿ ವಾಹನಗಳಿಂದ ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಿಗೂ ಸಂಕಷ್ಟ ಎದುರಾಗುತ್ತಿದೆ. ಎಂ ಸ್ಯಾಂಡ್, ಡಸ್ಟ್ ಸಾಗಿಸುವ ಲಾರಿಗಳಿಗೆ ಬಿಗಿಯಾಗಿ ಟಾರ್ಪಾಲ್ ಹೊದಿಸಬೇಕೆಂಬ ನಿಬಂಧನೆ ಇಲ್ಲಿ ಪಾಲನೆಯಾಗುತ್ತಿಲ್ಲ. ಇನ್ನು ಡಸ್ಟ್ ಗಾಳಿಗೆ ಚೆಲ್ಲಾಪಿಲ್ಲಿಯಾಗದಂತೆ ಇದಕ್ಕೆ ನೀರು ಹಾಯಿಸಿ ಸಾಗಿಸಲಾಗುತ್ತದೆ. ಈ ರೀತಿ ನೀರಿನೊಂದಿಗೆ ಬೆರೆಯುವ ಡಸ್ಟ್ ರಸ್ತೆಯುದ್ದಕ್ಕೂ ಲಾರಿ ಸಂದಿಯಿಂದ ಹೊರಹರಿಯುತ್ತಿರುತ್ತದೆ. ಇದು ಹಿಂದಿನಿಂದ ಆಗಮಿಸುವ ದ್ವಿಚಕ್ರ ವಾಹನ ಸವಾರರ ಮೈಮೇಲೆ ರಾಚುತ್ತಿರುತ್ತದೆ. ಇನ್ನು ಅತಿಯಾದ ಭಾರ ಹೇರಿಕೊಂಡು ಬರುವ ವಾಹನಗಳ ತಪಾಸಣೆ ನಿಯಮಿತವಾಗಿ ನಡೆಸದಿರುವುದು ನಿಯಮವನ್ನು ಗಾಳಿಗೆ ತೂರಿ ಸಂಚರಿಸಲು ಅನುವು ಮಾಡಿಕೊಟ್ಟಂತಾಗಿದೆ. ಒಂದೆಡೆ ಕಾನೂನು ಪಾಳಿಸದೆ ಸಾಗುವ ಲಾರಿಗಳಿಂದ ರಸ್ತೆಗೆ ಹಾನಿಯುಂಟಾಗುತ್ತಿದ್ದರೆ, ಇನ್ನೊಂದೆಡೆ, ಭಾರಿ ಗಾತ್ರದ ಲಾರಿಗಳು ದ್ವಿಚಕ್ರ ವಾಹನ ಸವಾರರಿಗೆ ಭೀತಿ ಹುಟ್ಟಿಸುವ ರೀತಿಯಲ್ಲಿ ಸಂಚಾರ ನಡೆಸುತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಸಂಜೆ ಆರ್‌ಟಿಒ ಚೆಕ್‌ಪೋಸ್ಟ್ ಬಂದ್
ಬೆಳಗ್ಗಿನಿಂದ ಸಂಜೆ 5ರವರೆಗೆ ವಾತ್ರ ಚೆಕ್‌ಪೋಸ್ಟ್ ಕಾರ್ಯಾಚರಿಸುತ್ತಿದ್ದು, ರಾತ್ರಿ ವೇಳೆ ಇಲ್ಲಿನ ಸಿಬ್ಬಂದಿಯನ್ನು ವಿಶೇಷ ಸ್ಕೆ ್ವೀಡ್‌ಗೆ ನಿಯೋಜಿಸಲಾಗುತ್ತಿದೆ. ಈ ಸಮಯದಲ್ಲಿ ಜಲ್ಲಿ, ಡಸ್ಟ್ ಸಾಗಾಟದ ವಾಹನಗಳು ರಾಜಾರೋಷವಾಗಿ ಚೆಕ್‌ಪೋಸ್ಟ್ ಹಾದುಹೋಗುತ್ತಿದೆ. ಅಲ್ಲಿವರೆಗೆ ಈ ಲಾರಿಗಳನ್ನು ಗಡಿ ಪ್ರದೇಶದಲ್ಲಿ ನಿಲುಗಡೆಗೊಳಿಸಲಾಗುತ್ತಿದೆ. ಚೆಕ್‌ಪೋಸ್ಟ್ ಮೂಲಕ ಖಾಲಿ ಲಾರಿಗಳು ಸಂಚರಿಸುತ್ತಿದ್ದು, ಇವುಗಳು ಎಷ್ಟು ಹೊತ್ತಿಗೆ ವಾಪಸಾಗುತ್ತಿದೆ ಎಂಬ ಬಗ್ಗೆ ಚೆಕ್‌ಪೋಸ್ಟ್ ಅಧಿಕಾರಿಗಳಿಗಾಗಲಿ, ಆರ್‌ಟಿಒ ಎನ್‌ೆರ್ಸ್‌ಮೆಂಟ್ ವಿಶೇಷ ಸ್ಕೆ ್ವೀಡ್‌ಗಾಗಲೀ ವಾಹಿತಿ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನುವುದು ನಾಗರಿಕರ ಆರೋಪ.
ಹಗಲು ಹೊತ್ತಿನಲ್ಲಿ ಇಂತಹ ಲಾರಿಗಳು ಚೆಕ್‌ಪೋಸ್ಟ್ ಮೂಲಕ ಸಂಚರಿಸುತ್ತಿಲ್ಲ. ಪೆರ್ಲ ಆರ್‌ಟಿಒ ಚೆಕ್‌ಪೋಸ್ಟ್ ಸಂಜೆ 5ರವರೆಗೆ ಮಾತ್ರ ಚಟುವಟಿಕೆ ನಡೆಸುತ್ತಿದ್ದು, ರಾತ್ರಿ ವೇಳೆ ಲಾರಿಗಳು ಸಂಚರಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಎನ್‌ೆರ್ಸ್‌ಮೆಂಟ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಪ್ರಶಾಂತ್ ಕುಮಾರ್ ಪೆರ್ಲ ಆರ್‌ಟಿಒ ಕಚೇರಿ ಎಂವಿಐ
ಕೆಎಸ್‌ಡಿ-10-ಸೆಪ್ಟಂಬರ್-2
ಕೆಎಸ್‌ಡಿ10ಸೆಪ್ಟಂಬರ್3