

ಕೊಳ್ಳೇಗಾಲ : ಪಟ್ಟಣದ 13ನೇ ವಾರ್ಡ್ ವ್ಯಾಪ್ತಿಯ ದೇವಾಂಗ ಪೇಟೆ ಕೋಡಿ ಬೀದಿಯಲ್ಲಿ ಹದಗೆಟ್ಟಿರುವ ಸಿಸಿ ರಸ್ತೆ ರಿಪೇರಿ ಮಾಡಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಕೋಡಿ ಬೀದಿಯ ರಸ್ತೆ ಹದ್ದಗೆಟ್ಟು 1 ವರ್ಷ ಕಳೆದಿದೆ. ಈ ರಸ್ತೆಯಲ್ಲಿ 70 ಕ್ಕೂ ಹೆಚ್ಚು ಮನೆಗಳಿವೆ. ಮೊದಲೇ ಚಿಕ್ಕದಾದ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಈ ನಡುವೆ ಸಿಸಿ ರಸ್ತೆ ಕುಸಿದು ಸಿಮೆಂಟ್‌ನ ದೊಡ್ಡ ದೊಡ್ಡ ಚೆಕ್ಕೆಗಳು ಮೇಲೆದ್ದಿವೆ.
ಬಡಾವಣೆಯ ವೃದ್ಧರು, ಮಕ್ಕಳು ಬಿದ್ದು ತೊಂದರೆಗೆ ಸಿಲುಕಿ ದರೆ ಯಾರು ಹೊಣೆ ಎಂದು ನಿವಾಸಿಗಳು ಪ್ರಶ್ನಿಸು ತ್ತಿದ್ದಾರೆ. ಸೈಕಲ್, ಬೈಕ್, ಆಟೋ ರಿಕ್ಷಾ ಸಂಚರಿಸಲು ಸಮಸ್ಯೆ ಆಗಿದೆ ಎಂದು ಅಳಲು ತೋಡಿ ಕೊಂಡಿದ್ದಾರೆ. ಈ ಬಗ್ಗೆ ಬಡಾವಣೆಯ ನಿವಾಸಿ, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಮಾತನಾಡಿ, 1 ವರ್ಷದಿಂದ ಕೋಡಿ ಬೀದಿ ರಸ್ತೆಯನ್ನು ನಗರಸಭೆ ಅಧಿಕಾರಿಗಳು ಸರಿಪಡಿಸಿಲ್ಲ. ಈ ರಸ್ತೆಯಲ್ಲೇ 13ನೇ ವಾರ್ಡ್ ನಗರಸಭೆ ಸದಸ್ಯೆ ಪವಿತ್ರಾ ಅವರ
ನಿವಾಸವಿದೆ. ಜನರೂ ಹಲವು ಬಾರಿ ರಸ್ತೆ ರಿಪೇರಿಗೆ ಆಗ್ರಹಿಸಿದ್ದಾರೆ. ಆದರೂ ಫಲ ನೀಡಿಲ್ಲ. ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ರಸ್ತೆಯಲ್ಲೇ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.