

ಪುತ್ತೂರು: ಕೆಲವು ತಿಂಗಳ ಹಿಂದೆ ಉದ್ಘಾಟನೆಗೊಂಡ ಪುತ್ತೂರಿನ ಹೊರವಲಯದ ನೆಹರು ನಗರದ ರೈಲ್ವೇ ಸೇತುವೆಯ ಬದಿಯಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೇತುವೆಯ ಮೇಲ್ಬಾಗಕ್ಕೆ ಹಾಕಿರುವ ಕಾಂಕ್ರೀಟ್ ಸ್ಲಾಬ್ ಬಿರುಕುಬಿಟ್ಟಿದ್ದು ಯಾವ ಕಾರಣದಿಂದ ಬಿರುಕುಬಿಟ್ಟಿದೆ ಎಂದು ಗೊತ್ತಾಗಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಪಂಜಿಗುಡ್ಡೆ ಈಶ್ವರಭಟ್, ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷ ಸುದೇಶ್ ಶೆಟ್ಟಿ, ಪುಡಾ ಸದಸ್ಯ ನಿಹಾಲ್ ಪಿ. ಶೆಟ್ಟಿ ಮತ್ತಿತರರು ಇದ್ದರು.