

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಅಜ್ಜಿನಡ್ಕದಿಂದ ಪುಣಚವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿಯನ್ನು ದುರಸ್ತಿಪಡಿಸಿ ನೀರು ಸರಾಗ ಹರಿಯುವಂತೆ ಮಾಡುವ ಕೆಲಸವನ್ನು ಬಂಟ್ವಾಳ ಲೊಕೋಪಯೋಗಿ ಇಲಾಖೆ ಮಾಡಿದೆ. ವಿಜಯವಾಣಿ ಸರಣಿಯಾಗಿ ಚರಂಡಿ ಅವ್ಯವಸ್ಥೆ ಬಗ್ಗೆ ವರದಿ ಪ್ರಕಟಿಸಿದ ಬಳಿಕ ಅ?ಕಾರಿಗಳು ಎಚ್ಚೆತ್ತಿದ್ದಾರೆ.
ಕಲ್ಲಡ್ಕ - ಸಾರಡ್ಕ ರಸ್ತೆಯ ವಿಟ್ಲ ಪೇಟೆಯ ಆಸುಪಾಸಿನಲ್ಲಿ ಹೊಸದಾಗಿ ರಸ್ತೆ ಕಾಮಗಾರಿ ನಡೆದಿದ್ದು, ಇದರಲ್ಲಿ ಚರಂಡಿ ಸಮರ್ಪಕವಾಗಿ ನೀಡುವ ಕಾರ್ಯವಾಗಿದೆ. ಕೆಲವು ವರ್ಷಗಳಿಂದ ಕಾಶಿಮಠದಲ್ಲಿ ರಸ್ತೆಯ ಬದಿ ನೀರು ನಿಂತು ವಾಹನಗಳಿಗೆ ಸಮಸ್ಯೆಯಾಗುತ್ತಿದ್ದ ಅವ್ಯವಸ್ಥೆ ಈ ಬಾರಿಯ ಕಾಮಗಾರಿಯಲ್ಲಿ ಸರಿಯಾಗಿದೆ.
ಉಕ್ಕುಡ - ಪುಣಚ ರಸ್ತೆಯಲ್ಲಿಯೂ ಚರಂಡಿ ದುರಸ್ತಿ ಕಾರ್ಯ ಮಳೆಗಾಲದ ಮೊದಲು ಇಲಾಖೆ ನಡೆಸಿದರೂ, ಮೋರಿಗಳಲ್ಲಿ ಕಸ ತುಂಬಿ ಮತ್ತೆ ಮತ್ತೆ ಸಮಸ್ಯೆಯಾಗಿ ಪರಿಣಮಿಸಿದೆ. ಶುಕ್ರವಾರ ರಸ್ತೆಯುದ್ದಕ್ಕೂ ಸಿಬ್ಬಂದಿ ತೆರಳಿ ಚರಂಡಿಯನ್ನು ಸರಿಪಡಿಸುವ ಕಾರ್ಯ ಮಾಡಿದ್ದಾರೆ.
ಸ್ಥಳೀಯ ಪಂಚಾಯಿತಿಗಳೂ ಸಮಸ್ಯೆಯನ್ನು ಗಮನಿಸಿ ಸಂಬಂಧಪಟ್ಟವರಿಗೆ ತಿಳಿಸಿ ಸರಿಪಡಿಸುವ ಗೋಜಿಗೆ ಹೋಗದಿರುವುದರಿಂದ ಸಮಸ್ಯೆ ತೀವ್ರಮಟ್ಟಕ್ಕೆ ಹೋಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಲೊಕೋಪಯೋಗಿ ಇಲಾಖೆಯ ಅ?ಕಾರಿಗಳು ಸರಿಪಡಿಸಿದ ಕಾಮಗಾರಿಗೆ ಮತ್ತೆ ಸಮಸ್ಯೆಯಾದರೂ ದುರಸ್ತಿಗೆ ಸ್ಥಳೀಯರು ಮುಂದಾಗುತ್ತಿಲ್ಲ.
ನಗರಸಭೆಗೆ ಸಂಬಂ?ಸಿದ ಕೆಲವು ಒಳರಸ್ತೆಗಳ ಬದಿಯಲ್ಲಿರುವ ಚರಂಡಿಗಳಲ್ಲಿ ಮೊದಲ ಮಳೆಯ ಸಂದರ್ಭ ಜಮೆಯಾದ ಕಸ ಕಡ್ಡಿಗಳ ತೆರವು ಕಾರ್ಯ ಇನ್ನೂ ನಡೆದಿಲ್ಲ. ಅ?ಕಾರಿ ವರ್ಗ ಜನರ ಕೆಲಸ ಮಾಡುವುದಕ್ಕಾಗಿ ನೇಮಕವಾಗಿರುವುದು ಎಂಬುದನ್ನೂ ಮರೆತಂತಿದೆ.
ಫಲಕವನ್ನು ಸರಿಪಡಿಸಿದ ಇಲಾಖೆ
ಹೆದ್ದಾರಿಗಳ ಹಾಗೂ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಊರಿನ ಹೆಸರು ಹಾಗೂ ದಾರಿ ಸೂಚಕ ಫಲಕಗಳನ್ನು ಅಳವಡಿಸಿದ್ದು, ಕಿಡಿಗೇಡಿಗಳು ಇದನ್ನು ಹಾನಿಗೊಳಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಇಲಾಖೆಗೆ ಇದನ್ನೂ ಶನಿವಾರ ಪರಿಶೀಲನೆ ನಡೆಸಿ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ಪುತ್ತೂರಿನಲ್ಲಿ ಕ್ಯಾರೇ ಇಲ್ಲ
ನಗರಸಭೆಯ ಅ?ಕಾರಿಗಳು ಕೆಲವು ಮನೆಗಳ ಮುಂಭಾಗದಲ್ಲಿ ಚರಂಡಿ ಸ್ವಚ್ಛ ಮಾಡಿದ ನಾಟಕ ಮಾಡಿದ್ದು ಬಿಟ್ಟರೆ, ಬೇರಾವ ಕಾಮಗಾರಿಗೂ ಮುಂದಾಗುತ್ತಿಲ್ಲ. ಮಳೆಯಿಂದ ತೀವ್ರ ಸಮಸ್ಯೆಯಾಗುವ ಪ್ರದೇಶಗಳಿಗೆ ತುರ್ತು ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗಿಲ್ಲ. ಜಿಲ್ಲಾ?ಕಾರಿಗಳೇ ನಗರಸಭೆಯ ಆಡಳಿತಾ?ಕಾರಿಯಾಗಿದ್ದು, ಅವರ ಮಾತಿಗೂ ಇಲ್ಲಿನ ಅ?ಕಾರಿಗಳು ಬಗ್ಗುತ್ತಿಲ್ಲವಾ ಎಂಬ ಅನುಮಾನ ಮೂಡುತ್ತಿದೆ.
ಅನುಭವಿಲ್ಲದ ಅ?ಕಾರಿ ವರ್ಗ
ಮಳೆಗಾಲದಲ್ಲಿ ತಗ್ಗು ಪ್ರದೇಶಕ್ಕೆ ಯಾವೆಲ್ಲಾ ಪ್ರದೇಶದಿಂದ ನೀರು ಹರಿದು ಬರುತ್ತದೆ ಮತ್ತು ಅಲ್ಲಿಂದ ಎಷ್ಟು ಗಾತ್ರದ ರಾಜಕಾಲುವೆ ನೀರು ಹರಿದು ಹೋಗಲು ಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದವರೇ ಇಲಾಖೇಯಲ್ಲಿ ತುಂಬಿಕೊಂಡಿದ್ದಾರೆ. ಮುಖ್ಯವಾಗಿ ಮಳೆಯಾಗದ ಪ್ರದೇಶದಿಂದ ಆಗಮಿಸುವ ಅನುಭವಿಲ್ಲದ ಅ?ಕಾರಿ ವರ್ಗದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳು ನಿತ್ಯ ಕೆಸರಿನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.