ಕೂಗೇಕೋಡಿಗೆ ರಸ್ತೆಯೇ ಇಲ್ಲ

3spt1
Published on

ಸೋಮವಾರಪೇಟೆ : ಪ್ರಗತಿಪರ ಕೃಷಿಕರೇ ಹೆಚ್ಚಿರುವ ಕೂಗೇಕೋಡಿ ಗ್ರಾಮದ ನಿವಾಸಿಗಳ ರಸ್ತೆ ಕೂಗು ಅರಣ್ಯ ರೋದನವಾಗಿದೆ. ಗುಂಡಿಗಳ ಮಧ್ಯೆ ರಸ್ತೆ ಹುಡುಕುವುದಕ್ಕೆ ಹರಸಾಹಸ ಪಡುವಂತಾಗಿದೆ. 20 ವರ್ಷಗಳ ಹಿಂದೆ ರಸ್ತೆ ಡಾಂಬರೀಕರಣಗೊಂಡಿತ್ತು. ಅಲ್ಲಿಂದ ಇಲ್ಲಿಯ ತನಕ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ವಿಜಯವಾಣಿಗೆ ಗ್ರಾಮಸ್ಥರು ತಮ್ಮ ಅಸಮಾಧಾನ ತೋಡಿಕೊಂಡರು. ಗ್ರಾಮದಲ್ಲಿ 80 ಕುಟುಂಬಗಳಿವೆ. ಶೇ.95 ಕಾಫಿ ಬೆಳೆಗಾರರಿದ್ದಾರೆ. ಬೆರಳಣಿಕೆಯಷ್ಟು ಕಾರ್ಮಿಕರಿದ್ದಾರೆ. ಶೇ.20ರಷ್ಟು ಪರಿಶಿಷ್ಟರ ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲರೂ ಗುಂಡಿಬಿದ್ದ ರಸ್ತೆಯಲ್ಲೇ ಜೀವನ ಚಕ್ರ ಸಾಗಿಸುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಶಾಸಕರ ನಿಧಿಯಿಂದ ಕೆಲವು ಕಡೆ ಚಿಕ್ಕಪುಟ್ಟ ರಸ್ತೆ ಕಾಮಗಾರಿ ನಡೆದಿರುವುದು ಬಿಟ್ಟರೆ, ಉಳಿದ ರಸ್ತೆ ಪಾಳುಬಿದ್ದಿದೆ. ಕಳೆದ 20 ವರ್ಷಗಳಿಂದ ರಸ್ತೆಗಾಗಿ ಬೇಡಿಕೆಯಿಟ್ಟಿದ್ದರೂ ರಸ್ತೆ ಕಾಮಗಾರಿಗೆ ಅನುದಾನ ಸಿಕ್ಕಿಲ್ಲ. ರೈತರು ತಾವು ಬೆಳೆದ ಕೃಷಿ ಫಸಲನ್ನು ವಾಹನಗಳಲ್ಲಿ ಸಾಗಿಸಲು ಪರದಾಡಬೇಕಾಗಿದೆ. ಮಳೆಗಾಲದಲ್ಲಂತೂ ರಸ್ತೆಯ ಗುಂಡಿಯೊಳಗೆ ನೀರು ಸಂಗ್ರಹವಾಗಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net