ಗುಂಡಿ ಬಿದ್ದ ರಸ್ತೆಯಲ್ಲೇ ನಿತ್ಯ ಸಂಚಾರ

27kkr1( ramanahali rd
Published on

ಕಿಕ್ಕೇರಿ: ಹೋಬಳಿಯ ರಾಮನಹಳ್ಳಿ, ಬೀಚೇನಹಳ್ಳಿ ಗ್ರಾಮಗಳಿಗೆ ಸಿದ್ದಾಪುರ ಮಾರ್ಗವಾಗಿ ತೆರಳಲು ಗುಂಡಿ ಬಿದ್ದ ರಸ್ತೆಗಳಿಂದ ಸವಾರರು ನಿತ್ಯ ಪರದಾಡುವಂತಾಗಿದೆ.

ಕಿಕ್ಕೇರಿಯಿಂದ ದೊರೇನಹಳ್ಳಿ, ಚೌಡೇನಹಳ್ಳಿ, ರಾಮನಹಳ್ಳಿ, ಮಾಣಿಕನಹಳ್ಳಿ ಮತ್ತಿತರ ಗ್ರಾಮಗಳಿಗೆ ತೆರಳಲು ಸಿದ್ದಾಪುರ ಮಾರ್ಗ ಅತೀ ಸನಿಹದ ರಸ್ತೆಯಾಗಿದೆ. ಅಯ್ಯನಕೊಪ್ಪಲುವರೆಗೆ ಡಾಂಬರು ಆಗಿದೆ. ಆದರೆ ಮುಂದಿನ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಣದೆ ಗುಂಡಿಗಳಿಂದ ತುಂಬಿದೆ. ರಸ್ತೆಯಲ್ಲಿ ಜಲ್ಲಿಕಲ್ಲು ಕಿತ್ತು ಬಂದಿದೆ. ಗುಂಡಿ ಬಿದ್ದ ರಸ್ತೆ, ಜಲ್ಲಿಕಲ್ಲುಗಳ ದರ್ಶನದಿಂದ ವಾಹನಗಳು ಹಾಗೂ ಪಾದಚಾರಿಗಳು ಓಡಾಡುವುದೇ ಕಷ್ಟಕರವಾಗಿದೆ. ಪಾದಚಾರಿಗಳು ಓಡಾಡುವಾಗ ವಾಹನಗಳು ಬಂದರೆ ಟೈರ್‌ಗೆ ಸಿಲುಕಿದ ಜಲ್ಲಿಕಲ್ಲು ಪುಟಿಯುವಂತಿದೆ. ಈ ರೀತಿಯ ಸಾಕಷ್ಟು ಅವಘಡಗಳು ಸಂಭವಿಸಿ ಗಾಯಗೊಂಡಿದ್ದಾರೆ.

ಗ್ರಾಮಗಳಿಂದ ಶಾಲಾ, ಕಾಲೇಜುಗಳಿಗೆ ವಿದ್ಯಾಥಿಗಳು ಸೈಕಲ್‌ನಲ್ಲಿ ಹೋಗುವಾಗ ಪಂಕ್ಚರ್ ಆಗುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳು ತೆರಳಲು ತೀವ್ರ ಕಷ್ಟಪಡುವಂತಾಗಿದೆ. ಜನಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡಿಸುವ ಆಶ್ವಾಸನೆ ಕೇವಲ ಚುನಾವಣೆ ಸಂದರ್ಭದಲ್ಲಿ ಎನ್ನುವಂತಾಗಿದೆ. ರೈತರು ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಜಮೀನುಗಳೊಂದಿಗೆ ತೆರಳಲು ಕಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net