

..............ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾರ್ಯ ನಡೆದಿದೆ. ಲಘು ವಾಹನಗಳಿಗೆ ಮಾತ್ರ ಅವಕಾಶವಿದೆ. ದೇವಿಮನೆ ಘಟ್ಟ ಪ್ರದೇಶ ಹಾಗೂ ವಿವಿಧ ಸೇತುವೆಗಳ ಸಮೀಪ ಇನ್ನೂ ಕಾಮಗಾರಿ ನಡೆದಿರುವ ಕಾರಣ ಓಡಾಟ ದುಸ್ತರವಾಗಿದೆ. ಶಿರಸಿ-ಹಾವೇರಿ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 25 ಕಿಮೀ ರಸ್ತೆ ಹಾಳಾಗಿದೆ. ಕೆಲವೆಡೆ ಭಾರಿ ಹೊಂಡಗಳು ಬಿದ್ದಿದ್ದು, ಅಂಥ ಪ್ರದೇಶಗಳಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಜೊಯಿಡಾ ರಾಮನಗರ ಭಾಗದಲ್ಲಿ ಹಾದು ಹೋಗುವ ಎನ್‌ಎಚ್4ಎ ಕೂಡ ವ್ಯವಸ್ಥಿತವಾಗಿಲ್ಲ. ಇದ್ದುದರಲ್ಲಿ ಹೊನ್ನಾವರ-ಮಾವಿನಗುಂಡಿ ಹೆದ್ದಾರಿ ಇದ್ದದ್ದರಲ್ಲಿ ಉತ್ತಮವಾಗಿದೆ.ರಾಷ್ಟ್ರೀಯ ಹೆದ್ದಾರಿಗಳೂ ಹಾಳು:ಅಲ್ಲದೇ 412 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು, 320 ಕಿಮೀಗಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. 100 ಕಿಮೀಗೂ ಅಽಕ ನಗರ ರಸ್ತೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಹಾಳಾದ ರಸ್ತೆಯ ಉದ್ದ ಸಾವಿರ ಕಿಮೀ ದಾಟುತ್ತಿದೆ. ಗುಂಡಿಗಳ ಸಂಖ್ಯೆ ಲಕ್ಷ ದಾಟಬಹುದು. ಶಿರಸಿ-ಹೆಗಡೆಕಟ್ಟಾ-ವಡ್ಡಿ-ಅಂಕೋಲಾ ರಾಜ್ಯ ಹೆದ್ದಾರಿ ಪರಿಸ್ಥಿತಿ ಬಹುಪಾಲು ಉತ್ತಮವಾಗಿದೆ.ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ರಾಜ್ಯ ಸರ್ಕಾರದ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಮಳೆಯಿಂದ ಎಷ್ಟು ನಷ್ಟವಾಗಿದೆ ಎಂಬ ಅಂದಾಜನ್ನು ಕಾಲಕಾಲಕ್ಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಅದರ ಪ್ರಕಾರ ಜಿಲ್ಲೆಯಲ್ಲಿ 175 ಕಿಮೀ ರಾಜ್ಯ ಹೆದ್ದಾರಿಗಳು ಹಾಳಾಗಿವೆ. ಪ್ರಮುಖವಾಗಿ ಶಿರಸಿ-ಯಲ್ಲಾಪುರ, ಶಿರಸಿ-ಸಿದ್ದಾಪುರ,ಶಿರಸಿ-ಹುಬ್ಬಳ್ಳಿ, ಕಾರವಾರ-ಜೊಯಿಡಾ, ಕಾರವಾ-ಮಲ್ಲಾಪುರ, ಮುಂತಾದ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ಸಂಕಟ ತರುತ್ತಿದೆ.ಸಾವಿರ ಕಿಮೀ ಹಾಳು:ನಗರದ ಪ್ರಮುಖ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹೊಂಡಗಳು ತುಂಬಿಕೊಂಡಿವೆ. ಪರಿಣಾಮ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ಹಾಳಾಗುತ್ತಿವೆ. ಪ್ರಯಾಣಿಕರ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ಪ್ರಯಾಣಿಕರು ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ಸಾಗುವುದು ಸಾಮಾನ್ಯವಾಗಿದೆ.ಕಾರವಾರ: ಜಿಲ್ಲೆಯ ಪ್ರಮುಖ ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿಕೊಂಡಿದ್ದು, ನೆಮ್ಮದಿಯ ಓಡಾಟವೇ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಸಾವಿರ ಕಿಮೀಗಿಂತ ಹೆಚ್ಚು ಉದ್ದದ ರಸ್ತೆಗಳು ಹಾಳಾಗಿವೆ ಎಂದು ಸ್ವತಃ ಜಿಲ್ಲಾ ವಿಪತ್ತು ನಿರ್ವಹಣಾ ಘಟಕವೇ ಲೆಕ್ಕ ಹಾಕಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷಆರ್.ವಿ.ದೇಶಪಾಂಡೆಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಸಹಜವಾಗಿ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿವೆ. ಗುಂಡಿಗಳನ್ನು ತುಂಬಲು ಇನ್ನೂ ಮಳೆ ಕಡಿಮೆಯಾಗಿಲ್ಲ. ಈಗ ಗುಂಡಿ ತುಂಬಿದರೆ ಅದು ನಿಲ್ಲುವುದಿಲ್ಲ. ಒಮ್ಮೆ ಮಳೆ ಕಡಿಮೆಯಾದ ತಕ್ಷಣ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭಿಸಲಾಗುವುದು.