ರಸ್ತೆ ಗುಂಡಿ ಮುಚ್ಚಿದ ಚಾಲಕರು

17kls2
Published on

ಕಳಸ: ಕಳಸ-ಕುದುರೆಮುಖ ರಾಜ್ಯಹೆದ್ದಾರಿಯ ನೆಲ್ಲಿಬೀಡು ಸಮೀಪ ಗುಂಡಿಯಿಂದ ಕೂಡಿದ್ದ ರಸ್ತೆಯನ್ನು ಚಾಲಕರೇ ಮಣ್ಣು ಹಾಕಿ ಮುಚ್ಚಿದ್ದಾರೆ. ಈ ಪ್ರದೇಶದಲ್ಲಿ ಸಾಕಷ್ಟು ದೊಡ್ಡ ಗಾತ್ರದ ಗುಂಡಿಗಳಿದ್ದು, ವಾಹನ ಸಂಚಾರರು ತೊಂದರೆ ಅನುಭವಿಸುತ್ತಿದ್ದರು.ಅಂಬುಲೆನ್ಸ್, ಲಾರಿ ಚಾಲಕರು ಈ ಸಮಸ್ಯೆಯಿಂದ ಬೇಸತ್ತಿದ್ದರು. ಇದರ ಸಮಸ್ಯೆಯ ತೀವ್ರತೆ ಅರಿತ ಚಾಲಕರು ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪತ್ರಿಕೆಯೊಂದಿಗೆ ಮಾತನಾಡಿ, ಈ ರಸ್ತೆಗೆ 5 ಕೋಟಿ ರೂ. ಬಿಡುಗಡೆಯಾಗಿದ್ದು ಕಳಸ-ಎಸ್.ಕೆ ಬಾರ್ಡ್‌ರ್ ರಾಜ್ಯಹೆದ್ದಾರಿಯ ಆಯ್ದ ಭಾಗಗಳಿಗೆ ರಸ್ತೆ ದುರಸ್ತಿಗಾಗಿ 5 ಕೋಟಿ ರೂ ಬಿಡುಗಡೆಯಾಗಿದೆ. ಇದರಲ್ಲಿ ನೆಲ್ಲಿಬೀಡು ಸಮೀಪದ ರಸ್ತೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಡ್ರೈವರ್‌ಗಳಾದ ಶಶಿ, ಅಶ್ರಫ್, ಪ್ರಭಾಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net