ರಸ್ತೆ ಕಾಮಗಾರಿ ಕಳಪೆ ಜೆಡಿಎಸ್ ಪ್ರತಿಭಟನೆ

22charan9
Published on

ಚಾಮರಾಜನಗರ: ತಾಲೂಕಿನ ಚಂದಕವಾಡಿ ಗ್ರಾಮದ  ಹಾಲಿನ ಡೈರಿ ರಸ್ತೆಯಲ್ಲಿ ನಡೆಯುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಮಹೇಶ್ ಅವರ ನೇತೃತ್ವದಲ್ಲಿ ಬೀದಿ ನಿವಾಸಿಗಳು  ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು. 


ಜೆಡಿಎಸ್ ಮುಖಂಡ ಮಹೇಶ್ ಮಾತನಾಡಿ,  ಗುಣಮಟ್ಟದ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ  ಕಾಮಗಾರಿ ನಡೆಯಲು ಬಿಡುವುದಿಲ್ಲ ಕಳಪೆ ಕಾಮಗಾರಿ ವಿರುದ್ದ ಹೋರಾಟ ಮಾಡುವುದಾಗಿ ಎಚ್ವರಿಸಿದ್ದರು. ಪ್ರತಿಭಟನೆಯಲ್ಲಿ ನಾಗೇಂದ್ರ, ಮೂರ್ತಿ, ಬಂಗಾರಚಾರಿ, ರಘು, ಮಹದೇವಸ್ವಾಮಿ, ಆಟೋ ನಾಗರಾಜು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net