ರಸ್ತೆ ಸುಧಾರಣೆಯಿಂದ ಜನರಿಗೆ ಅನುಕೂಲ

22Chikkodigrameen1
Published on

ಚಿಕ್ಕೋಡಿ ಗ್ರಾಮೀಣ: ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದೇ ನಮ್ಮ ಆದ್ಯತೆ. ರಸ್ತೆ ಸುಧಾರಣೆಯಿಂದ ರೈತರು, ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಕ್ಸಂಬಾ-ಸಿದ್ದಾಪುರವಾಡಿ ರಸ್ತೆಯಿಂದ ಉಳ್ಳಾಗಡ್ಡಿವಾಡಿ ಹತ್ತಿರದ ಕೆನಾಲ್ ರಸ್ತೆಗೆ ಸಂಪರ್ಕ ಕಲ್ಪಿಸುವ 1 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕರ ಅನುದಾನದಲ್ಲಿ ಕ್ಷೇತ್ರದ ವಿವಿಧ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನೀಲ ಸಪ್ತಸಾಗರೆ ಮಾತನಾಡಿ, ರಸ್ತೆ ಸುಧಾರಣೆಯಿಂದ ರೈತರಿಗೆ ಅನುಕೂಲವಾಗಲಿದೆ. ಹೀಗಾಗಿ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಗಣೇಶ ಹುಕ್ಕೇರಿ ಕಾಮಗಾರಿಗೆ ಭೂಮಿಪೂಜೆ ನೆವರೇರಿಸಿದರು. ಪುರಸಭೆ ಸದಸ್ಯರಾದ ಉಮೇಶ ಸಾತ್ವರ, ಕಿರಣ ಮಾಳಿ, ರವಿ ಖೋತ, ಅಂಕುಶ ಖೋತ, ದಿಲೀಪ ದೇಸಾಯಿ, ಸಂಜು ದೇಸಾಯಿ, ಜಾಮಶಾಹ್ ಮಕಾನದಾರ, ಮುನಿರ ದಾಡಿವಾಲೆ, ಶಿವಾಜಿ ಮಾಳಿ, ರವಿ ಘಾಟಗೆ, ಪಿಂಟು ಮಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net