ರಸ್ತೆ ಸುಧಾರಣೆಗೆ ಸಹಕಾರ ನೀಡಿ

28RAM-1-Web
ಗೊಣ್ಣಾಗರದಿಂದ ಶಬರಿಕೊಳ್ಳ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹಾದೇವಪ್ಪ ಯಾದವಾಡ ಭೂಮಿಪೂಜೆ ನೆರವೇರಿಸಿದರು.
Published on

ರಾಮದುರ್ಗ: ರಸ್ತೆ ಸುಧಾರಣೆ ಮಾಡುವ ಸಂದರ್ಭದಲ್ಲಿ ಗ್ರಾಮದ ರೈತರು ಗುತ್ತಿಗೆದಾರರೊಂದಿಗೆ ಅನವಶ್ಯಕವಾಗಿ ತಂಟೆ ತಕರಾರು ಮಾಡದೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಗೊಣ್ಣಾಗರದಿಂದ ಶಬರಿಕೊಳ್ಳದ ವರೆಗಿನ 1.32 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಪಂ ಸದಸ್ಯೆ ಶಿವಕ್ಕ ಬೆಳವಡಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಮೆಳ್ಳಿಕೇರಿ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಸುರೇಬಾನ ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ತಾಪಂ ಸದಸ್ಯ ಪುಂಡಲೀಕಪ್ಪ ಹಳ್ಳಿಕೇರಿ, ಪಿಎಂಜೆಎಸ್‌ವೈ ಇಲಾಖೆಯ ಅಧಿಕಾರಿಗಳು, ಗ್ರಾಮದ ಮುಖಂಡರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net