ಚತುಷ್ಪಥ ರಸ್ತೆಯ ಇಂಟರ್‌ಲಾಕ್ ದುರಸ್ತಿ

PTR_20 AUG_2
Published on

ಪುತ್ತೂರು: ಉಪ್ಪಿನಂಗಡಿ- ಪುತ್ತೂರು ಚತುಷ್ಪಥ ರಸ್ತೆಯಲ್ಲಿ ಯದ್ವಾತದ್ವ ಇಂಟರ್‌ಲಾಕ್ ಅಳವಡಿಸಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ವರದಿ ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ರಸ್ತೆ ಸಂಚಾರ ಬಂದ್ ಮಾಡಿ, ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಸೇಡಿಯಾಪು ಭಾಗದಲ್ಲಿ ಅಳವಡಿಸಿದ ಇಂಟರ್‌ಲಾಕನ್ನು ತೆಗೆದು ಮತ್ತೆ ಅಡಿ ಭಾಗವನ್ನು ಸಮತಟ್ಟು ಮಾಡಿ ಅಳವಡಿಸುವ ಕಾರ್ಯ ಬುಧವಾರ ಬೆಳಗ್ಗಿನಿಂದ ಪ್ರಾರಂಭವಾಗಿದೆ.

ಇಂಟರ್‌ಲಾಕ್ ನಿಧಾನ ಸಂಚಾರ ಹಾಗೂ ಸಾಮಾನ್ಯ ಭಾರದ ವಾಹಗಳು ಹೋಗುವಲ್ಲಿಗೆ ಮಾತ್ರ ಸೂಕ್ತವಾಗಿದ್ದು, ಇದನ್ನು ಹೆದ್ದಾರಿಗಳಿಗೆ ಅಳವಡಿಸುವುದೇ ಅವೈಜ್ಞಾನಿಕ. ಅಽಕಾರಿಗಳು ಇದೆಲ್ಲವನ್ನು ಸರಿಯಾಗಿ ಗಮನಿಸದೆ, ಜನಸಾಮಾನ್ಯರಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಮತ್ತೆ ಮತ್ತೆ ರಸ್ತೆ ಬ್ಲಾಕ್!

ರಸ್ತೆಯನ್ನು ಕಿತ್ತು ತೆಗೆದು ಇಂಟರ್‌ಲಾಕ್ ಅಳವಡಿಸುವುದಕ್ಕೆ ಒಂದು ವಾರ ರಸ್ತೆಯನ್ನು ಮುಚ್ಚಲಾಗಿತ್ತು. ಈ ಸಂದರ್ಭ ಏಕಮುಖ ಸಂಚಾರದ ಸರಿಯಾದ ಮಾಹಿತಿಯಿಲ್ಲದೆ, ವಾಹನಗಳ ಅಪಘಾತಕ್ಕೂ ಕಾರಣವಾಗಿತ್ತು. ಈಗ ದುರಸ್ತಿಗೆ ಮತ್ತೆ ರಸ್ತೆಯನ್ನು ಮುಚ್ಚಲಾಗಿದೆ. ಒಟ್ಟಿನಲ್ಲಿ ವಾಹನ ಸವಾರರಿಗೆ ನಿತ್ಯರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುವ ಸಮಸ್ಯೆ ನಿಶ್ಚಿತ ಎಂಬಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net