

ಹಾನಗಲ್ಲ: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಬೈಕ್ನಿಂದ ಬಿದ್ದು ಸವಾರರು ಗಾಯಗೊಂಡ ಟನೆ ತಾಲೂಕಿನ ನೆಗವಣಿಗ ಗ್ರಾಮದ ಬಳಿ ನಡೆದಿದೆ.
ಮಹದೇವಪ್ಪ (40) ಮತ್ತು ಕಲಾವತಿ (30) ಗಾಯಗೊಂಡವರು.
ಇವರು ಬೈಕ್ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಗ್ರಾಮದ ಬಳಿಯಿರುವ ಫಾಮ್ರ್ ಹೌಸ್ ಬಳಿ ರಸ್ತೆಯ ಮಧ್ಯೆಭಾಗದಲ್ಲಿ ಬಿದಿದ್ದ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.