ರೈತರು ಸಹಕಾರ ನೀಡಿದರೆ ರಸ್ತೆ ವಿಸ್ತರಣೆ

Oplus_131072
Oplus_131072
Published on


ಚನ್ನರಾಯಪಟ್ಟಣ : ಪಟ್ಟಣಕ್ಕೆ ಹೊಂದಿಕೊಂಡಂತ್ತಿರುವ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೊಳಿಸುವ ವೇಳೆ ರಸ್ತೆ ಅಕ್ಕಪಕ್ಕದ ರೈತರು ಸಹಕಾರ ನೀಡಿ ಜಾಗ ನೀಡಿದ್ದಲ್ಲಿ ರಸ್ತೆ ವಿಸ್ತರಣೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಭೂಮಿಯ ಮೌಲ್ಯ ಹೆಚ್ಚಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.


ತಾಲೂಕಿನ ಕಸಬಾ ಹೋಬಳಿ ಡಿ.ಕಾಳೇನಹಳ್ಳಿ ಗ್ರಾಮದಲ್ಲಿನ ಮಂಚಿಕಟ್ಟೆಯಿಂದ ಸಂಪರ್ಕ ಕಲ್ಪಿಸುವ ಅಡಗೂರು ರಸ್ತೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ 90 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಭಾನುವಾರದಂದು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


ಇದೀಗ ಪಟ್ಟಣ ಬೆಳೆದಿರುವ ಹಿನ್ನೆಲೆಯಲ್ಲಿ ಪಟ್ಟಣದ ನಾಲ್ಕು ಕಡೆ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನಾಲ್ಕು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 140 ಕೋಟಿ ರೂ. ಗಳಲ್ಲಿ ಹೈಟೆಕ್ ಘಟಕ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಸಂಬಂದಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅನುದಾನ ತರಲಾಗುವುದು ಎಂದರು.


ಈ ವೇಳೆ ಗ್ರಾಮದ ಮುಖಂಡರಾದ ಆನಂದ್ ಕಾಳೇನಹಳ್ಳಿ, ಗೋಪಾಲ, ವೆಂಕಟೇಶ್, ಮೊಗಣ್ಣಗೌಡ, ರಂಗಸ್ವಾಮಿ, ನಾಗೇಶ್, ಶಿವಪ್ರಕಾಶ್, ಕೆ.ಎಂ.ಕೃಷ್ಣ, ಕುಮಾರ್, ನಟೇಶ್, ಶಂಭುಲಿಂಗೇಗೌಡ, ಸುರೇಶ್, ಲಕ್ಷ್ಮೀಶ, ಶಂಕರ, ಇಂಜಿನಿಯರ್ ಬಾಬಣ್ಣ, ಗುತ್ತೀಗೆದಾರರಾದ ಶಂಕರ್, ಸಂತೋಷ್ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net