

ಅಳವಂಡಿ: ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ವಿಷಯ ಕುರಿತು ಚರ್ಚಿಸಲಾಯಿತು.
ಗ್ರಾಮ ವ್ಯಾಪ್ತಿಯ ಕೊಪ್ಪಳ-ಮುಂಡರಗಿ ರಸ್ತೆಯನ್ನು 80 ಅಡಿ ವಿಸ್ತರಣೆ ಮಾಡುತಿದ್ದು, ಈ ಕಾಮಗಾರಿಯ ಪ್ರಗತಿ, ಗುಣಮಟ್ಟ, ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುವುದು ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರ ಕುರಿತು ಚರ್ಚಿಸಲಾಯಿತು. ನಂತರ ಅಧಿಕಾರಿಗಳಿಂದ ಪತ್ರಗಳ ಚರ್ಚೆ, ಸಾರ್ವಜನಿಕರ ಅರ್ಜಿಗಳ ಚರ್ಚೆ, ನರೇಗಾ ಕಾಮಗಾರಿ, ಸ್ವಚ್ಛತೆ, ಬೀದಿದೀಪ ನಿರ್ವಹಣೆ ಅಲ್ಲದೇ ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಪಿಡಿಒ ಕೊಟ್ರಪ್ಪ ಅಂಗಡಿ, ಗ್ರಾಪಂ ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಸದಸ್ಯರಾದ ವಿಶ್ವನಾಥ ದೋತರಗಾವಿ, ಅನ್ವರ ಗಡಾದ, ಗುರುಬಸವರಾಜ ಹಳ್ಳಿಕೇರಿ, ಹನುಮಂತ ಮೂಲಿಮನಿ, ನಾಗರಾಜ ನವನಳ್ಳಿ, ಹನುಮಂತ ಮೋರನಾಳ, ಶಶಿಕಲಾ ನಾಗರಳ್ಳಿ ಲಕ್ಷ್ಮವ್ವ ಬಿಸರಳ್ಳಿ, ರೇಣುಕಪ್ಪ ಹಳ್ಳಿಕೇರಿ, ಗವಿಸಿದ್ದಪ್ಪ ಭಜಂತ್ರಿ, ಸಿಬ್ಬಂದಿ ಶಿವಮೂರ್ತಿ, ದೇವೇಂದ್ರರಡ್ಡಿ ಇತರರಿದ್ದರು.