ರಸ್ತೆ, ಚರಂಡಿ ನಿರ್ಮಾಣ ಅವಶ್ಯ

1
ದಿಗ್ಗೇವಾಡಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ರವಿ ಚೌಗಲೆ, ಮಲ್ಲಪ್ಪ ಮೈಶಾಳೆ, ಅಪ್ಪಾಸಾಬ ಮೈಶಾಳೆ, ಗಂಗಾಧರ ಮೈಶಾಳೆ ಇತರರು ಇದ್ದರು.
Published on

ರಾಯಬಾಗ: ಪ್ರತಿ ಗ್ರಾಮ ಶುಚಿತ್ವದಿಂದ ಕೂಡಿ ಅಭಿವೃದ್ಧಿ ಹೊಂದಲು ರಸ್ತೆ ಹಾಗೂ ಚರಂಡಿ ನಿರ್ಮಾಣ ಅವಶ್ಯ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ದಿಗ್ಗೇವಾಡಿ ಮತ್ತು ಬಾವನ ಸೌಂದತ್ತಿ ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಇಲಾಖೆಯಡಿ ಮಂಜೂರಾದ 60 ಲಕ್ಷ ರೂ. ಅನುದಾನದಡಿ ಕೆಆರ್‌ಐಡಿಎಲ್ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಚಿಕ್ಕೋಡಿ ಕೆಆರ್‌ಐಡಿಎಲ್ ಇಇ ಮೋಹನಕುಮಾರ, ಬಾವನ ಸೌಂದತ್ತಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ದಿಗ್ಗೇವಾಡಿ ಗ್ರಾಪಂ ಅಧ್ಯಕ್ಷ ರವಿ ಚೌಗಲೆ, ತಾತ್ಯಾಸಾಬ ಕಾಟೆ, ಅನಿಲ ಹಂಜೆ, ಅಜಿತ ಖೇಮಲಾಪುರೆ, ರಂಜಾನ್ ಮಕಾನದಾರ, ಮಲ್ಲಪ್ಪ ಮೈಶಾಳೆ, ಬಸವರಾಜ ದೋಣವಾಡೆ, ಗಂಗಾಧರ ಮೈಶಾಳೆ, ದಿಲೀಪ ಜಮಾದಾರ, ಅಪ್ಪಾಸಾಬ ಮೈಶಾಳೆ, ಪ್ರಕಾಶ ಮಿರ್ಜೆ, ಅರುಣ ಶಿಂಧೆ, ರಾಜು ಖಾಂಡೇಕರ, ಚಿದಾನಂದ ಮಂಗಸೂಳಿ, ಚೇತನ ಕಾಟೆ, ಅಜಿತ ಕುಂಬಾರ, ಮಲ್ಲು ಬಿಷ್ಠೆ, ಅಜಿತ ನಾಗರಾಳೆ, ಬೋಲಾ ಕಡಾಳೆ, ಅರ್ಜುನ ಬಂಡಗರ, ಇಮಾಮ್ ಜಮಾದಾರ, ಮಹಾದೇವ ಕೋಳಿ, ರಮೇಶ ಐನಾಪುರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net