

ಹಾವೇರಿ: ರೋಡ್ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಹಿಂದೆ ಕುಳಿತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ನೆಲೋಗಲ್ಲ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.
ನಗರದ ಕೂಗಿಕಟ್ಟಿ ಒಣಿಯ ನಿವಾಸಿ ವನಜಾಕ್ಷಿ ಹೊನ್ನಪ್ಪ ಹಳ್ಳೂರ (48) ಮೃತ ಮಹಿಳೆ.
ಇವರು ತಮ್ಮ ಪುತ್ರನ ಬೈಕ್ ಮೇಲೆ ರಾಣೆಬೆನ್ನೂರ ಕಡೆಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಸಮಯದಲ್ಲಿ ಬೈಕ್ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೆಳಗೆ ಬಿದ್ದ ವನಜಾಕ್ಷಿ ತಲೆಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.