

ಮಂಗಳೂರು : ಮಂಗಳೂರು -ಅತ್ರಾಡಿ ರಾಜ್ಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗದಲ್ಲಿ ಅಕ್ಟೋಬರ್ 10ರವರೆಗೆ ಕಾಲ ಸಂಚಾರ ಮಾರ್ಪಾಡು ಮಾಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ಮಂಗಳೂರಿನಿಂದ ಕಟೀಲ್ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಕಿನ್ನಿಪದವು ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮುರ ಜಂಕ್ಷನ್ ಎಡ ತಿರುವು - ಬಜಪೆ ಹಳೆ ಪೊಲೀಸ್ ಸ್ಟೇಷನ್ ಎಡ ತಿರುವು - ಬಜಪೆ ಚರ್ಚ್ ಜಂಕ್ಷನ್ ರಸ್ತೆ ಬಲ ತಿರುವು ಪಡೆದು ಕಟೀಲು ಕಡೆಗೆ ಸಂಚರಿಸುವುದು.
ಮಂಗಳೂರಿನಿಂದ ಕೈಕಂಬ ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಕಿನ್ನಿಪದವು ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಮುರ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಬಜಪೆ ಹಳೆ ಪೊಲೀಸ್ ಸ್ಟೇಷನ್ ಎದುರು ಬಲ ತಿರುವು ಪಡೆದು ಕೈಕಂಬ ಕಡೆಗೆ ಸಂಚರಿಸಬೇಕು.
ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕಟೀಲಿನಿಂದ ಬಜಪೆ ಚರ್ಚ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗು ಪಡೆದು ಕೈಕಂಬ ರಸ್ತೆ, ಬಜಪೆ ಹಳೆ ಪೊಲೀಸ್ ಸ್ಟೇಷನ್ ಬಳಿ ಬಲಕ್ಕೆ ತಿರುಗಿ ಮುರ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಕಿನ್ನಿ ಪದವು ಜಂಕ್ಷನ್‌ಗೆ ಬಂದು ಸೇರಬೇಕಯ.
ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೈಕಂಬದಿಂದ ಬಜಪೆ ಹಳೆ ಪೊಲೀಸ್ ಠಾಣೆಯ ಬಳಿ ಎಡಕ್ಕೆ ತಿರುಗು ಪಡೆದು ಮುರ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಕಿನ್ನಿಪದವು ಜಂಕ್ಷನ್‌ಗೆ ಬಂದು ಸೇರಬೇಕು ಎಂದು ಆದೇಶಿಸಲಾಗಿದೆ.