ರಸ್ತೆ ಅಭಿವೃದ್ಧಿ ಶೀಘ್ರ ಕಾರ್ಯಾರಂಭ

LXR LAMANI POOJE
Published on

ಲಕ್ಷೆ್ಮೕಶ್ವರ: ಕ್ಷೇತ್ರದಲ್ಲಿ ಅನೇಕ ರಸ್ತೆಗಳ ಸುಧಾರಣೆಗೆ ವಿಶೇಷ ಅನುದಾನ ಕಲ್ಪಿಸುವಂತೆ ಕ್ರಿಯಾಯೋಜನೆಯೊಂದಿಗೆ ಸರ್ಕಾರಕ್ಕೆ ಮನವಿ ಮಾಡಿದ್ದು, ಅನುದಾನದ ಲಭ್ಯತೆಯ ಆಧಾರದಲ್ಲಿ ಪ್ರಮುಖ ರಸ್ತೆಗಳು ಸೇರಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಗೊಜನೂರ ಗ್ರಾಮದಲ್ಲಿ ಲಕ್ಷೆ್ಮೕಶ್ವರ- ಗದಗ ಸಂರ್ಪಸುವ ಕೈಗಾ- ಇಳಕಲ್ ರಾಜ್ಯ ಹೆದ್ದಾರಿಯ ಆಯ್ದ ಭಾಗದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗದಗ- ಲಕ್ಷೆ್ಮೕಶ್ವರ ಸಂರ್ಪಸುವ ಈ ರಸ್ತೆ ಅಭಿವೃದ್ಧಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಕ್ಷೇತ್ರ ವ್ಯಾಪ್ತಿಯ ಬಹುತೇಕ ರಸ್ತೆ ಅಭಿವೃದ್ಧಿಯಾಗಲಿವೆ. ರಾಜ್ಯ ಸರ್ಕಾರ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ನೀಡಿದ ಅನುದಾನದಲ್ಲಿ ಸೂರಣಗಿ, ಬಾಲೆಹೊಸೂರ, ಹೊಸಳ್ಳಿ ಇತರ ಭಾಗದ ರಸ್ತೆಗಳ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಲಾಗುವುದು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ. ಜೂನ್​ದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಮಂಜುನಾಥ ಚಲುವಾದಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಸಿ.ಪಿ. ಮಾಡಳ್ಳಿ, ರಮೇಶ ದನದಮನಿ, ಮಂಜುನಾಥ ಕಣವಿ, ಮುತ್ತಣ್ಣ ವಡಕಣ್ಣವರ, ಶಿವನಗೌಡ ಕಂಠಿಗೌಡರ, ನೀಲಪ್ಪ ಗುಡ್ಡಣ್ಣವರ, ಚಂದ್ರೇಗೌಡ ಪಾಟೀಲ, ನಿಂಗನಗೌಡ ಪಾಟೀಲ, ಹನಮಂತಪ್ಪ ಮಾದರ, ಮಹೇಶ ಅಥಣಿ, ಭೀಮಪ್ಪ ನಾಯಕ, ದ್ಯಾಮಣ್ಣ ಅಡರಕಟ್ಟಿ, ಪಿಡಿಒ ಶಿವಾನಂದ ಮಾಳವಾಡ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ಹನುಮಂತೇಗೌಡ ಪಾಟೀಲ, ನಿಂಗನಗೌಡ ಕಣಿವಿ, ಶಂಭುಲಿಂಗಗೌಡ ಪಾಟೀಲ, ಮಾಬುಸಾಬ ಆನಿ, ರಾಕೇಶ ಪುರದ, ನೀಲಪ್ಪಗೌಡ ಪಾಟೀಟ, ಪಂಚಾಕ್ಷರ ಸವಣೂರು, ಗುತ್ತಿಗೆದಾರ ಡಿ.ಎಂ. ಅಡರಕಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net