

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿಗೆ ಶಾಶ್ವತ ಯೋಜನೆಗಳನ್ನು ನೀಡುವ ಮೂಲಕ ರೈತಪರ ಹೆಚ್ಚು ಕಾಳಜಿ ವಹಿಸಿದ್ದೇನೆ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಆಯತನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸವನ್ನು ತಮ್ಮ ಮನದಲ್ಲಿ ಇಟ್ಟುಕೊಂಡು ಮತ್ತೆ ನನಗೆ ಅಧಿಕಾರ ಕೊಟ್ಟಿದ್ದಾರೆ. ನಾನು ಬೇರೆಯವರ ತರಹ ಸುಳ್ಳು ಹೇಳಿಕೊಂಡು ರಾಜಕಾರಣ, ಆಡಳಿತ ಮಾಡಿಲ್ಲ. ಜನರ ನಿರೀಕ್ಷೆಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಸಮಾಧಾನ ನನ್ನಲ್ಲಿ ಇದೆ. ತಾಲೂಕಿಗೆ ಅದರಲ್ಲೂ ಪ್ರಮುಖವಾಗಿ ರೈತಾಪಿ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಗ್ರಾಪಂ ಅಧ್ಯಕ್ಷ ಸೀಗೂರು ವಿಜಯ್, ಸದಸ್ಯರಾದ ಅನಿಲ್‌ಕುಮಾರ್, ಮಂಜುನಾಯಕ, ಸೊಸೈಟಿ ಅಧ್ಯಕ್ಷ ಶಂಕರ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಮಂಜು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಹದೇವ್, ಮುಖಂಡರಾದ ಪಿ.ಮಹದೇವ್, ರಮೇಶ್, ತಮ್ಮಣ್ಣಯ್ಯ, ಪರಮೆಶ್, ಧನಂಜಯ, ನಂಜುಂಡಸ್ವಾಮಿ, ಸಣ್ಣಕಾಳಯ್ಯ, ವೀರಭದ್ರಯ್ಯ, ಶಿವಣ್ಣ, ಜವರಯ್ಯ, ಬಸವರಾಜು, ಮಂಜು, ಕೆ.ಆರ್.ಡಿ.ಎಲ್. ಇಂಜಿನಿಯರ್‌ಗಳಾದ ವಿಜಯ್, ಸುಗಂಧರಾಜ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ಕುಮಾರ್, ರವಿಕುಮಾರ್, ಪಿಡಿಒ ನಾಗೇಂದ್ರ ಕುಮಾರ್ ಇದ್ದರು.