ಬಿಎಂಐಸಿ ಯೋಜನೆ ಕುರಿತು ಸದನದಲ್ಲಿ ಚರ್ಚೆ

16M.D.R.13
ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಅಪ್ಪೇಗೌಡ, ಶಂಕರ್, ನೀಲಯ್ಯ, ರವೀಂದ್ರಕುಮಾರ್, ವೆಂಕಟೇಶ್, ಶಿವರಾಜ್, ಶ್ರೀನಿವಾಸ್ ಇದ್ದರು.
Published on

ಮದ್ದೂರು: ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆಯಿಂದ ಉಂಟಾಗಿರುವ ತೊಂದರೆ ಕುರಿತು ಸದನದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.

ತಾಲೂಕಿನ ಕೆ.ಕೋಡಿಹಳ್ಳಿ ಹಾಗೂ ಶಿವಪುರದ 23ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಪಟ್ಟಣದ ಅಭಿವೃದ್ಧಿಗೆ ಬಿಎಂಐಸಿ ಯೋಜನೆ ಅಡ್ಡಲಾಗಿದ್ದು, ಈ ಯೋಜನೆಯನ್ನು ತೆಗೆದು ಹಾಕುವಂತೆ ಈಗಾಗಲೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜತೆ ಹಲವಾರು ಬಾರಿ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಸೋಮವಾರ ನಡೆಯುವ ವಿಧಾನಸಭಾ ಕಲಾಪದಲ್ಲಿ ಬಿಎಂಐಸಿ ಯೋಜನೆಯ ವಿಚಾರವನ್ನು ಚರ್ಚೆಗೆ ಇಡಲಾಗಿದೆ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.

ಸಚಿವ ಸ್ಥಾನದಿಂದ ಕೆಳಗಿಳಿಸುವಲ್ಲಿ ನನ್ನ ವಿರುದ್ಧ ದೆಹಲಿಯಲ್ಲಿ ಪಿತೂರಿ ಮಾಡಿದ್ದಾರೆ ಎಂದು ಮಾಜಿ ಕೆ.ಎನ್.ರಾಜಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಉದಯ್, ಪಿತೂರಿ ವಿಚಾರ ನನಗಂತೂ ಗೊತ್ತಿಲ್ಲ. ರಾಜಣ್ಣ ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಯುವ ಘಟಕದ ಅಧ್ಯಕ್ಷ ಕೀರ್ತಿ, ಪುರಸಭಾ ಸದಸ್ಯ ಮೋಹನ್, ಗ್ರಾಪಂ ಮಾಜಿ ಸದಸ್ಯ ಅಪ್ಪೇಗೌಡ ಮುಖಂಡರಾದ ಶಂಕರ್, ನೀಲಯ್ಯ, ರವಿಂದ್ರ ಕುಮಾರ್, ವೆಂಕಟೇಶ್, ಶಿವರಾಜ್, ಶ್ರೀನಿವಾಸ್, ಸತೀಶ್, ಪುಟ್ಟಪ್ಪ, ಸುರೇಶ್, ನಾಗರಾಜ್, ಮಹಾಲಿಂಗಯ್ಯ, ಧನಂಜಯ್, ರಾಜೇಂದ್ರ, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net