ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

New Project (83)
Published on

ಪೆರ್ಲ: ಎಣ್ಮಕಜೆ ಗ್ರಾ.ಪಂ. 11ನೇ ವಾರ್ಡ್ ವ್ಯಾಪ್ತಿಯ ಬೆದ್ರಂಪಳ್ಳದಿಂದ ಬಲ್ತಕಲ್ಲು ಮೂಲಕ ಪಾಟ್ಲದಳವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಬನದ ಪರಿಸರದಲ್ಲಿ ಸೋಮವಾರ ಜರುಗಿತು.

ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸದಸ್ಯೆ ಕುಸುಮಾವತಿ ಮೊದಲಾದವರಿದ್ದರು.

ಯೋಜನೆಗೆ ಹಣ ಮಂಜೂರುಗೊಳಿಸಿದ ಶಾಸಕರನ್ನು ರಸ್ತೆ ಫಲಾನುಭವಿಗಳ ಪರವಾಗಿ ಸನ್ಮಾನಿಸಲಾಯಿತು. ಪಂಚಾಯಿತಿ ಸಹಾಯಕ ಅಭಿಯಂತ ಶ್ರೀನಾಥ್ ವರದಿ ಮಂಡಿಸಿದರು. ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ ಸ್ವಾಗತಿಸಿದರು. ಶ್ರೀಧರ್ ಕುಕ್ಕಿಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net