ರಸ್ತೆ ಅಭಿವೃದ್ಧಿಗೆ 21.27 ಕೋಟಿ ರೂ.

19MDL1-Web
ವಡೇರಹಟ್ಟಿ ಗ್ರಾಮದಲ್ಲಿ ಉದಗಟ್ಟಿ-ನಾಗನೂರ-ವಡೇರಹಟ್ಟಿ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ಮುತ್ತೆಪ್ಪ ಕುಳ್ಳೂರ, ಮಾರುತಿ ತೋಳಮರಡಿ, ಭೂತಪ್ಪ ಗೊಡೇರ, ಗೋಪಾಲ, ಹನುಮಂತ ಕೊಪ್ಪದ ಇತರರು ಇದ್ದರು.
Published on

ಮೂಡಲಗಿ : ಅರಬಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 21.27 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ಉದಗಟ್ಟಿಯಿಂದ-ನಾಗನೂರ ವಡೇರಹಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಾಮಗಾರಿಗೆ 5.35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು.

6.19 ಕೋಟಿ ರೂ. ವೆಚ್ಚದಲ್ಲಿ ಮಲ್ಲಾಪುರ ಪಿಜಿಯಿಂದ-ಬಡಿಗವಾಡ-ದುರದುಂಡಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 9.73 ಕೋಟಿ ರೂ. ವೆಚ್ಚದಲ್ಲಿ ಬೆಟಗೇರಿಯಿಂದ-ಮೆಳ ವಂಕಿ-ಉಪ್ಪಾರಹಟ್ಟಿ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ವಕೀಲ ಮುತ್ತೆಪ್ಪ ಕುಳ್ಳೂರ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಪ್ರಭಾಶುಗರ್ ನಿರ್ದೇಶಕ ಭೂತಪ್ಪ ಗೊಡೇರ, ತಾಪಂ ಸದಸ್ಯ ಗೋಪಾಲ ಕುದರಿ, ಹನುಮಂತ ಕೊಪ್ಪದ, ಪರಸಪ್ಪ ಸಾರಾಪುರ, ಮಲಕಾರಿ ವಡೇರ, ಬನಪ್ಪ ವಡೇರ, ರಂಗಪ್ಪ ಛಪ್ರಿ, ರುದ್ರಗೌಡ ಪಾಟೀಲ, ವಿಠ್ಠಲ ಗಿಡೋಜಿ, ರಾಜು ಬಳಿಗಾರ, ಅಡಿವೆಪ್ಪ ಹಾದಿಮನಿ, ಪಾಂಡು ದೊಡಮನಿ, ಶಿದ್ಲಿಂಗ ಗಿಡೋಜಿ, ಚಂದ್ರು ಮೋಟೆಪ್ಪಗೋಳ, ರೆಬ್ಬೋಜಿ ಮಳಿವಡೇರ, ಗೋಪಾಲ ಭೀರನಗಡ್ಡಿ, ಮಾರುತಿ ಮದ್ರಾಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net