

ಗಂಗಾವತಿ: ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಅನುದಾನ ಕ್ರೋಢೀಕರಿಸಲಾಗುತ್ತಿದ್ದು, ಹಂತಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಗರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ದುರುಗೇಶ ದೊಡ್ಮನಿ ಹೇಳಿದರು.
ಇದನ್ನೂ ಓದಿ: ಕೂಡ್ಲಿಗಿ ಪಟ್ಟಣ ಅಭಿವೃದ್ಧಿಗೆ ಸಹಕಾರ ನೀಡಿ
ನಗರದ 13ನೇ ವಾರ್ಡ್ ಶರಣಬಸವೇಶ್ವರ ಕ್ಯಾಂಪ್‌ನಲ್ಲಿ ಎಸ್ಟಿಪಿ, ಟಿಎಸ್ಪಿಯ 24.10 ಯೋಜನೆಯಡಿ ಮಂಜೂರಾದ ರಸ್ತೆ ಅಭಿವೃದ್ಧಿ ಪೇವರ್ಸ್ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಾರ್ಡ್‌ನ ಎಲ್ಲ ರಸ್ತೆಗಳ ಅಭಿವೃದ್ಧಿಗಾಗಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶಾಸಕರ ಅನುದಾನದಲ್ಲೂ ಹಣ ನೀಡುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿಗೂ ಮನವಿ ಮಾಡಿದ್ದೇವೆ. ಮೊದಲ ಹಂತದಲ್ಲಿ 3.50ಲಕ್ಷ ರೂ. ವೆಚ್ಚದ ಕಾಮಗಾರಿ ಚಾಲನೆ ನೀಡಲಾಗಿದ್ದು, ವಾರ್ಡ್ ಸಂಪರ್ಕದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.
ಸಮುದಾಯ ಶೌಚಗೃಹ, ಕುಡಿವ ನೀರಿನ ಯೋಜನೆ, ವಿದ್ಯುತ್ ಸಂಪರ್ಕ ಸೇರಿ ಅಗತ್ಯ ಕಾಮಗಾರಿ ನಿರ್ವಹಿಸಲಾಗುವುದು. ರೈಸ್ ಮಿಲ್‌ಗಳಿಂದ ಸಮಸ್ಯೆಯಾಗಿರುವ ಹಾರು ಬೂದಿ ನಿಯಂತ್ರಣಕ್ಕೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಮತ್ತು ರೈಸ್ ಮಿಲ್ ಮಾಲೀಕರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಸಿ ನೆಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದು, ರಸ್ತೆಯುದ್ದಕ್ಕೂ ಮರಗಳನ್ನು ಬೆಳೆಸುವ ಸಂಕಲ್ಪ ಕೈಗೊಂಡರು. ಪ್ರಮುಖರಾದ ದುರುಗೇಶ ದೊಡ್ಮನಿ, ಯಲ್ಲಪ್ಪ ಪೂಜಾರಿ, ಯಮನೂರಪ್ಪ ಗೋನಾಳ್, ಹನುಮಸಿಂಗ್, ಶಿವಸ್ವಾಮಿ, ಆನಂದ ಇತರರಿದ್ದರು.