1.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

14KDR6
ಕಡೂರಿನ ಮತಿಘಟ್ಟದ ಶ್ರೀಗುರು ರೇವಣಸಿದ್ದೇಶ್ವರ ದೇವಾಲಯ ಸಮಿತಿಯಿಂದ ಶಾಸಕ ಕೆ.ಎಸ್.ಆನಂದ್ ಅವರನ್ನು ಸನ್ಮಾನಿಸಿದರು. ಶ್ರೀಕಂಠ ಒಡೆಯರ್, ರೇವಣ್ಣ, ಕುಬೇರಪ್ಪ, ಕರಿಬಡ್ಡೆ ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಇದ್ದರು.
Published on

ಕಡೂರು: ಕಸಬಾ ಹೋಬಳಿ ಮುಖ್ಯ ಕೇಂದ್ರ ಮತಿಘಟ್ಟ ಗ್ರಾಮದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರಾಗಿದ್ದು, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕಿನ ಮತಿಘಟ್ಟ ಗ್ರಾಮದಲ್ಲಿ ಭಾನುವಾರ ರೇವಣಸಿದ್ದೇಶ್ವರ ಸಮುದಾಯ ಭವನದ ಮುಂದುವರಿದ ಕಾಮಗಾರಿ ಹಾಗೂ ಜೆಜೆಎಂ ಕಾಮಗಾರಿಗಳು ಸೇರಿದಂತೆ 80 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮತಿಘಟ್ಟ ಗ್ರಾಮದಲ್ಲಿ ಕಳೆದ ಹತ್ತಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಗುರು ರೇವಣಸಿದ್ದೇಶ್ವರ ಸಮುದಾಯಭವನದ ಮುಂದುವರಿದ ಕಾಮಗಾರಿಗೆ ಈಗಾಗಲೇ 20 ಲಕ್ಷ ರೂ.ನೀಡಲಾಗಿದ್ದು ಇನ್ನು ಹೆಚ್ಚುವರಿಯಾಗಿ 17 ಲಕ್ಷ ರೂ.ಅನುದಾನವನ್ನು ಒದಗಿಸಲಾಗುವುದು. ಉಳಿದಿರುವ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಭೂ ಸೇನಾ ನಿಗಮದ ಇಂಜಿನಿಯರ್‌ಗೆ ಸೂಚಿಸಿದರು.
ಮತಿಘಟ್ಟ, ದೇವರಹಳ್ಳಿ ಮತ್ತು ಕವಲಿಪುರ ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ 40 ಲಕ್ಷ ರೂ.ಗಳ ಜಲಜೀವನ್ ಮಿಷನ್‌ನಿಂದ ಕಾಮಗಾರಿ ಆರಂಭವಾಗಲಿದ್ದು , ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರು ದೊರಕಲಿದೆ. ಮತಿಘಟ್ಟ ಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಗ್ರಾಮದಲ್ಲಿ ಎಲ್ಲ ಸಮುದಾಯದ ಜನರು ಸಹೋದರರಂತೆ ಜೀವಿಸುತ್ತಿದ್ದು, ಯಾವುದೇ ಸಮಸ್ಯೆ ಬಂದರು ಒಂದಾಗಿ ಬಾಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣ, ಗುರುರೇವಣಸಿದ್ದೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಶ್ರೀಕಂಠಒಡೆಯರ್, ಮುಖಂಡರಾದ ಕುಬೇರಪ್ಪ, ಕರಿಬಡ್ಡೆ ಶ್ರೀನಿವಾಸ್, ಮಂಜುನಾಥ್, ಪರಮೇಶ್ವರಪ್ಪ, ಚಟ್ಟನಹಳ್ಳಿ ಶಿವು, ನಂದೀಶ್ ಬಾಬು, ಲಕ್ಕೆನಹಳ್ಳಿ ಕೃಷ್ಣಮೂರ್ತಿ, ಅಣ್ಣಪ್ಪ, ಆನಂದ್, ಕಲ್ಲೇಶ, ಎಲ್.ಎಂ. ಪರಮೇಶ್ವರಪ್ಪ, ಮಹೇಂದ್ರಚಾರ್ ಭೂಸೇನಾ ನಿಗಮದ ಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net