ಕ್ಷೇತ್ರದಲ್ಲಿ ಅದ್ಯತೆ ಅನುಸಾರ ರಸ್ತೆ ಅಭಿವೃದ್ಧಿ

TKE 1 (AJP) (2)
Published on

ತರೀಕೆರೆ: ಆದ್ಯತೆ ಅನುಸಾರ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ

ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಅಜ್ಜಂಪುರ ತಾಲೂಕಿನ ಮಾಕನಹಳ್ಳಿಯಲ್ಲಿ 8.50ಲಕ್ಷ ರೂ. ಗರಗದಹಳ್ಳಿಯಲ್ಲಿ 10ಲಕ್ಷ

ರೂ., ಗಡೀಹಳ್ಳಿಯಲ್ಲಿ 10 ಲಕ್ಷ ರೂ., ಅರಬಲ-ಗೊಲ್ಲರಹಟ್ಟಿ ಗ್ರಾಮದಲ್ಲಿ 15 ಲಕ್ಷ

ರೂ.ಹಾಗೂ ಅರಶಿನಘಟ್ಟ ಗ್ರಾಮದಲ್ಲಿ 35ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಅನುದಾನ

ಬಳಸಿ ಅಭಿವೃದ್ಧಿಪಡಿಸಲಾಗುತ್ತಿರುವ ಕಾಂಕ್ರಿಟ್ ರಸ್ತೆ ನಿಮಾರ್ಣ ಕಾಮಗಾರಿಗೆ

ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮಳೆಗಾಲದಲ್ಲಿ ತರೀಕೆರೆ ಹಾಗೂ

ಅಜ್ಜಂಪುರ ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಹಂತ

ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆ ನಿರ್ಮಾಣ ಕಾಮಗಾರಿಗೆ

ರಾಜ್ಯಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗುತ್ತಿದ್ದು, ಇನ್ನಿತರ

ಯೋಜನೆಗಳಿಗೆ ಬೇಕಾದ ಹಣ ಮಂಜೂರಾತಿಗೆ ಮನವಿ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಪ್ರಮುಖರಾದ ಗಡೀಹಳ್ಳಿ ಮಂಜುನಾಥ್, ಪರಮೇಶಪ್ಪ, ತಿಪ್ಪೇಶ್,

ಓಂಕಾರ್, ಮಂಜು, ಹರೀಶ್, ಲೋಹಿತ್, ಗಿರೀಶ್, ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net