ಆದ್ಯತೆ ಮೇರೆಗೆ ರಸ್ತೆಗಳ ಅಭಿವೃದ್ಧಿ

IMG20251025135014
ಬೈಲುಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ಟಿ.ಸ್ವಾಮಿ. ರೆಹಮತ್ ಜಾನ್ ಬಾಬು, ಧನರಾಜ್, ಶೇಖರ್ ಮಹದೇವ್ ಇತರರು ಇದ್ದರು.
Published on

ಬೈಲುಕುಪ್ಪೆ: ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ರಸ್ತೆ ಅಭಿವೃದ್ಧಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಕೆಲವು ರಸ್ತೆಗಳು ಮಳೆಯಿಂದ ಹಾಳಾಗಿದೆ ಎಂದು ಸಾರ್ವಜನಿಕರ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಪರಿಶೀಲಿಸಿ, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳ ರೈತರು ಜಮೀನಿಗೆ ಹೋಗುವ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಬೈಲುಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಭೂಮಿ ಪೂಜೆ ಮತ್ತು ನೂತನ ಕನಕ ಭವನವನ್ನು ಸಚಿವರು ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡರಾದ ರೆಹಮತ್ ಜಾನ್ ಬಾಬು, ಟಿ.ಸ್ವಾಮಿ, ಬಸವರಾಜ್, ಶಮಿವುಲ್ಲಾ ಖಾನ್, ಸುಬ್ರಹ್ಮಣ್ಯ, ಚೆನ್ನಕಲ್ ಶೇಖರ್, ಮಹದೇವ್, ರಾಜಯ್ಯ, ಅಣ್ಣಯ್ಯ, ನವಿಲೂರು ಚೆನ್ನಪ್ಪ ಧನರಾಜ್, ಶೇಕ್ ಅಸ್ಲಾಂ ರಿಯಾಜ್, ಕೆ.ಕೆ.ರಾಮಸ್ವಾಮಿ, ನರಸಿಂಹ ಶೆಟ್ಟಿ, ಕುಮಾರ್, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಾದ ನಿಸರ್ಗಪ್ರಿಯ, ಸುನಿಲ್ ಕುಮಾರ್, ನಾಗರಾಜು, ಪಿಡಿಒ ಬೋರೇಗೌಡ, ಸೋಮಯ್ಯ, ಪದ್ಮಶ್ರೀ, ಕುಸುಮ, ರವಿಪ್ರಸಾದ್, ದಿನೇಶ್, ವೆಂಕಟೇಶ್, ಮಲ್ಲಿಕಾರ್ಜುನ, ಪ್ರಕಾಶ್, ಲೋಕೇಶ್, ನಿಸಾರ್ ಅಹಮದ್, ರಘು, ಭಾರತಿ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net