ರಸ್ತೆ ಹಾಳು ವಾಹನ ಸವಾರರಿಗೆ ಗೋಳು

ROAD DAMMAGED
Published on

ಯಲ್ಲಾಪುರ: ಯಲ್ಲಾಪುರ-ಮುಂಡಗೋಡ ರಸ್ತೆ ಹದಗೆಟ್ಟು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹುಲಿಮನೆ ಸಮೀಪ ದೊಡ್ಡ ಕೆರೆಯಂತಹ ಹೊಡಂಗಳು ಉಂಟಾಗಿ, ಪ್ರತಿನಿತ್ಯ ವಾಹನಗಳು ಸಿಲುಕಿಕೊಂಡು ಪರದಾಡುವುದು ಸಾಮಾನ್ಯವಾಗಿದೆ.
ಮುಂಡಗೋಡ ಮುಖ್ಯ ರಸ್ತೆ ಇದಾಗಿದ್ದು, ಸಮೀಪದ ಹುಣಶೆಟ್ಟಿಕೊಪ್ಪ, ಕುಚಗಾಂವ ಸುತ್ತಲಿನ ಜನರ ನಿತ್ಯದ ಓಡಾಟಕ್ಕೆ ಈ ರಸ್ತೆಯೇ ಅನಿವಾರ್ಯ. ಇಲ್ಲಿ ದೊಡ್ಡ ಹೊಂಡಗಳು ಉಂಟಾಗಿ ಮಳೆ ನೀರು ನಿಂತು ಹೊಂಡ ಎಷ್ಟು ಆಳವಿದೆ ಎಂಬ ಅರಿವಿಲ್ಲದೇ ವಾಹನಗಳನ್ನು ಇಳಿಸಿ ಸವಾರರು ಪರದಾಡುವಂತಾಗಿದೆ.
ಬಸ್, ಲಾರಿಯಂತಹ ದೊಡ್ಡ ವಾಹನಗಳು ಹೊಂಡದಲ್ಲಿ ಸಿಲುಕಿ, ನಂತರ ಸ್ಥಳೀಯರ ನೆರವಿನಿಂದ ಮೇಲಕ್ಕೆತ್ತುವ ಘಟನೆಗಳು ಕಳೆದ ಕೆಲ ದಿನಗಳಿಂದ ನಿತ್ಯವೂ ನಡೆಯುತ್ತಿದೆ. ಬೈಕ್, ಕಾರ್ ನಂತಹ ವಾಹನಗಳಂತೂ ಹೊಂಡಕ್ಕಿಳಿದರೆ ಜಖಂಗೊಳ್ಳುವುದು ತಪ್ಪಿದ್ದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net