ಲ್ಯಾಂಡ್‌ಲಿಂಕ್ಸ್ ಒಳ ರಸ್ತೆ ಕುಸಿತ

IMG-20211013-WA0004
Published on

ಮಂಗಳೂರು: ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ದೇರೆಬೈಲ್ ಸಮೀಪದ ಲ್ಯಾಂಡ್‌ಲಿಂಕ್ಸ್ ನ ಒಳ ರಸ್ತೆ ಕುಸಿದಿದೆ. ಕಾಂಕೀಂಟ್ ರಸ್ತೆಗೆ ಹೊಂದಿಕೊಂಡಂತೆ ಇರುವ ಡಾಂಬರು ರಸ್ತೆ ಕುಸಿದಿದ್ದು, ಮನೆಯೊಂದರ ಆವರಣ ಗೋಡೆಗೆ ಪಕ್ಕದಲ್ಲೇ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯ ಉಂಟಾಗಿಲ್ಲ. ಕೆಲ ತಿಂಗಳ ಹಿಂದೆ ಇಲ್ಲಿ ಸಣ್ಣ ಗುಂಡಿ ಉಂಟಾಗಿದ್ದು, ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮೇಯರ್ ಪ್ರೇಮಾನಂದ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ದುರಸ್ತಿ ಮಾಡದ ಪರಿಣಾಮ ಗುಂಡಿ ದೊಡ್ಡದಾಗಿ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net