ರಸ್ತೆ ನಿರ್ಮಾಣ: ಕಾಮಗಾರಿ ಪರಿಶೀಲನೆ

kudumangalure road
Published on

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ.ನ ಎರಡನೇ ವಾರ್ಡ್‌ನ ಬಸವೇಶ್ವರ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಕಾಮಗಾರಿಯನ್ನು ಪಿಡಿಓ ಸಂತೋಷ್ ಹಾಗೂ ಗ್ರಾ.ಪಂ ಕೆ.ಬಿ.ಶಂಶುದ್ಧೀನ್ ಪರಿಶೀಲನೆ ನಡೆಸಿದರು.

ಬಸವೇಶ್ವರ ಬಡಾವಣೆಯ ವಿಜಿರವರ ಮನೆಯಿಂದ ಬೇಬಿರವರ ಮನೆವರೆಗೆ ೧.೮ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ವೀಕ್ಷಣೆ ನಡೆಸಿ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಕೂಡುಮಂಗಳೂರು ಗ್ರಾ.ಪಂ ನ ಎರಡನೇ ವಾರ್ಡ್‌ನಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ನಡೆಸುತ್ತಾ ಬರಲಾಗಿದೆ. ವಾರ್ಡ್‌ಗೆ ಒಳಪಡುವ ಸುಂದರನಗರ, ವಿನಾಯಕ ಬಡಾವಣೆ, ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಸಮಾನವಾಗಿ ಹಾಗೂ ಆದ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಬಳಸಲಾಗಿದೆ ಎಂದರು.

ಈ ಸಂದರ್ಭ ಬಸವೇಶ್ವರ ಬಡಾವಣೆಯ ಗ್ರಾಮಸ್ಥರಾದ್ ಅನೀಶ್, ಗೌರಮ್ಮ, ರಫೀಕ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net