ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ

1 Dwd 3
Published on

ವಿಜಯವಾಣಿ ಸುದ್ದಿಜಾಲ ದಾರವಾಡ

ತಾಲೂಕಿನ ಬಣದೂರ ಶಾಖೆಯ ಹಳ್ಳಿಗೇರಿ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದವರು ಹಾಗೂ ಹಾಗೂ ಅದಕ್ಕೆ ಸಹಕರಿಸಿದ ಅಽಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಇತರರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ ಕುಮಾರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ.

ಧಾರವಾಡ ಅರಣ್ಯ ವಲಯದ ಹಳ್ಳಿಗೇರಿ ಸರಹದ್ದಿನಲ್ಲಿನ ಕಾಯ್ದಿಟ್ಟ ಅರಣ್ಯದ ಸರ್ವೇ ನಂಬರ್ 22ರಲ್ಲಿ ಸುಮಾರು ನೂರಾರು ಸಾಗವಾನಿ, ಮತ್ತಿ, ಇತರ ಮರಗಳನ್ನು ಕಟಾವು ಮಾಡಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಸುಮಾರು 1 ಕಿ.ಮೀ.ವರೆಗೆ ರಸ್ತೆ ನಿರ್ಮಾಣ ಮಾಡಿದ್ದು, ಇನ್ನೂ ಮುಂದುವರಿದಿದೆ. ಖಾಸಗಿ ವ್ಯಕ್ತಿಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಽಕಾರಿಗಳು ಶಾಮೀಲಾಗಿ ರಸ್ತೆ ನಿರ್ಮಿಸುತ್ತಿರುವುದು ಹಾಗೂ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬ0ದಿದೆ. ರಸ್ತೆ ನಿರ್ಮಿಸುತ್ತಿರುವ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸರ್ವೇ ನಂ. 22 ಕಾಯ್ದಿಟ್ಟ ಅರಣ್ಯ. 23 ಮತ್ತು 24 ಖಾಸಗಿ ವ್ಯಕ್ತಿಗಳ ಜಮೀನು. ಇದನ್ನು ಶಾಸಕ ವಿನಯ ಕುಲಕರ್ಣಿ ಅವರ ಕುಟುಂಬದವರು ಕೋರ್ಟ್ ನೋಂದಣಿ ಮಾಡಿಕೊಂಡಿದ್ದಾರೆ. ಅವರ ಕುಟುಂಬದವರೇ ಮುಂದೆ ನಿಂತು ಸರ್ವೇ ಮಾಡಿಸಿದ್ದಾರೆ. ಅರಣ್ಯ ಇಲಾಖೆ ಅಽಕಾರಿಗಳು ಒತ್ತಡಕ್ಕೆ ಮಣಿದು ಕೆಳ ಹಂತದ ಅಽಕಾರಿಗಳಿಗೆ ಶೋಕಾಸ್ ಕೊಟ್ಟು ಪ್ರಕರಣ ಮುಚ್ಚಿಡಬಾರದು.

- ಬಸವರಾಜ ಕೊರವರ, ಜನಜಾಗೃತಿ ಸಂಘದ ಅಧ್ಯಕ್ಷ

ಕಾಯ್ದಿಟ್ಟ ಅರಣ್ಯದಲ್ಲಿ ಮೊದಲು ಕಾಲು ದಾರಿ ಇತ್ತು. ಇತ್ತೀಚೆಗೆ ಅನಽಕೃತ ರಸ್ತೆ ನಿರ್ಮಿಸಿರುವ ದೂರು ಬಂದಿತ್ತು. ಆರ್‌ಎ-ï‌ಒ ಕಳುಹಿಸಿ ಪರಿಶೀಲನೆ ಮಾಡಿಸಲಾಗಿದೆ. ನಾನೂ ಸ್ಥಳ ಪರಿಶೀಲನೆ ಮಾಡಿದ್ದೇನೆ. ಠಾಕೂರ್ ಗುರುದಯಾಳ್ ಸಿಂಗ್ ಎಂಬುವರು ರಸ್ತೆ ಮಾಡಿದ್ದಾರೆ. ಕಡಿದ ಮರ, ರಸ್ತೆ ನಿರ್ಮಾಣಕ್ಕೆ ಬಳಸಿದ ಟ್ರ‍್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ. ಇಬ್ಬರು ಸಿಬ್ಬಂದಿಗೆ ಶೋಕಾಸ್ ಜಾರಿ ಮಾಡಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಕೊಡಲು ಹೇಳಲಾಗಿದ್ದು, ವರದಿ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು.

- ವಿವೇಕ ಕವರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net