ಆರ್.ತುಳಸಿಕುಮಾರ್
ಬೆಂಗಳೂರು: ಮಹಾನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಕೈಗೆತ್ತಿಕೊಂಡಿದ್ದು, ಸಮರ್ಪಕವಾಗಿ ಕಾಮಗಾರಿ ಕೈಗೊಳ್ಳದ ಕಾರಣ ಸಾರ್ವಜನಿಕರ ಒಡಾಟ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಎರಡು ತಿಂಗಳ ಹಿಂದೆ ಚಾಮರಾಜಪೇಟೆಯ ವಿವಿಧ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. ಯೋಜನೆಗೆ ಚಾಲನೆ ನೀಡಿದಾಗ ನಾಗರಿಕರು ಸ್ಥಳೀಯ ಶಾಸಕ ಹಾಗೂ ಬಿಬಿಎಂಪಿಗೆ ಧನ್ಯವಾದ ಸಲ್ಲಿಸಿದ್ದರು. ಆದರೀಗ ಕಾಮಗಾರಿ ನಡೆದಿರುವ ವೇಗ ಕಂಡು ಸಾರ್ವಜನಿಕರು ಹೌಹಾರಿದ್ದಾರೆ. ಯಥಾಪ್ರಕಾರ ಗುತ್ತಿಗೆದಾರರು ರಸ್ತೆಯ ಹೊಂದಿಷ್ಟು ಭಾಗದಲ್ಲಿ ರಸ್ತೆ ಅಗೆದು ಕೊಳವೆ ಅಳವಡಿಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನೊಂದೆಡೆ ರಸ್ತೆಯ ಒಂದು ಬದಿ ಮಾತ್ರ ಕೆಲಸ ಮಾಡಿ ಇನ್ನೊಂದು ಬದಿಯಲ್ಲಿ ಮಣ್ಣು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಕಾಮಗಾರಿ ಕೈಗೊಂಡಿರುವ ರಸ್ತೆಗಳಲ್ಲಿ ಜನರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಫುಟ್‌ಪಾತ್‌ನಲ್ಲಿದ್ದ ಕಲ್ಲು, ಟೈಲ್ಸ್‌ಗಳನ್ನು ಕಿತ್ತುಹಾಕಿರುವುದರಿಂದ ಪಾದಚಾರಿಗಳು ರಸ್ತೆ ಮೇಲೆ ಓಡಾಡುವಂತಾಗಿದೆ. ವಾಹನ ಸವಾರರು ಕೂಡ ಗುಂಡಿ ಬಿದ್ದ ಮಾರ್ಗಗಳಲ್ಲಿ ಸಂಚರಿಸಲು ಕಷ್ಟಪಡುತ್ತಿದ್ದಾರೆ. ಕೆಲವೆಡೆ ಬೀದಿ ದೀಪಗಳನ್ನು ತೆಗೆದು ಹೊಸ ಕಂಬಗಳನ್ನು ನೆಡಬೇಕಿರುವುದರಿಂದ ರಾತ್ರಿ ವೇಳೆ ಕತ್ತಲಿನಲ್ಲಿ ಸಂಚಾರ ಅನಿವಾರ್ಯವಾಗಿದೆ.
ಚಾಮರಾಜಪೇಟೆ 1ನೇ ಮುಖ್ಯರಸ್ತಯ ಎಲ್‌ಐಸಿ ಕಚೇರಿ ಬಳಿಕ ಒಳಚರಂಡಿ ಒಡೆದುಹೋಗಿ ತಿಂಗಳು ಕಾಲ ದುರಸ್ತಿ ಪಡಿಸಿರಲಿಲ್ಲ. ಸ್ಥಳೀಯರು ಕಾಮಗಾರಿ ನಿಲ್ಲಿಸುವ ಬೆದರಿಕೆ ಹಾಕಿದ ಮೇಲಷ್ಟೇ ದುರಸ್ತಿ ಕೈಗೊಳ್ಳಲಾಗಿದೆ. ಜತೆಗೆ ಅಡ್ಡರಸ್ತೆಗಳ ಜಾಗದಲ್ಲಿ ಪೈಪ್‌ಗಳನ್ನು ಹಾಕಲು 2-3 ಬಾರಿ ನೆಲ ಅಗೆಯುತ್ತಿರುವ ಕಾರಣ ಇಲ್ಲಿನ ನಿವಾಸಿಗಳು ವಾಹನಗಳನ್ನು ಮನೆಯಿಂದ ಹೊರಗೆ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಆಮೆಗತಿ ಕಾಮಗಾರಿಗೆ ವರ್ತಕರ ಆಕ್ಷೇಪ:
ಹೊಸ ತರಗುಪೇಟೆಯ ರಸ್ತೆಯೊಂದರಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಅರ್ಧದಷ್ಟೇ ನಡೆದಿದ್ದು, ಇನ್ನುಳಿದ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ. ತಿಂಗಳ ಹಿಂದೆ ಆರಂಭವಾದ ಕೆಲಸಕ್ಕಾಗಿ ಕೊಳವೆ ಅಳವಡಿಸಲು ಹೆಚ್ಚಿನ ದಿನಗಳನ್ನು ತೆಗೆದುಕೊಂಡ ಕಾರಣ ಇಲ್ಲಿನ ಅಂಗಡಿಗಳಿಗೆ ಗ್ರಾಹಕರು ಬಂದು ಹೋಗಲು ತೊಂದರೆ ಆಗುತ್ತಿದೆ. ಜತೆಗೆ ಮಳಿಗೆಗಳಿಗೆ ಸರಕುಗಳನ್ನು ವಾಹನದಲ್ಲಿ ತರಲು ಸಾಧ್ಯವಾಗದ ಕಾರಣ ವರ್ತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕೈಗೊಳ್ಳಬೇಕೇ ಹೊರತು ಎಲ್ಲರಿಗೂ ಅಡ್ಡಿಯುಂಟು ಮಾಡಿದರೆ ಹೇಗೆ ಎಂಬುದು ಇಲ್ಲಿನ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.

ಮಳೆಯಿಂದ ವಿಳಂಬದ ನೆಪ:
ವೈಟ್ ಟಾಪಿಂಗ್ ಕಾಮಗಾರಿಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ಹಾಗಾಗಿ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವಂತೆ ಪಾಲಿಕೆ ಮುಖ್ಯಸ್ಥರು ಎಲ್ಲ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಆದರೆ, ಕೆಲಸದ ಮೇಲ್ವಿಚಾರಣೆ ವಹಿಸಿರುವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಕಾರಣ ಯುಟಿಲಿಟಿ ಸ್ಥಳಾಂತರ ಕೆಲಸ ನಿಧಾನವಾಗಿದೆ. ಜತೆಗೆ ಕಳೆದ 15 ದಿನಗಳಲ್ಲಿ ಹಲವು ದಿನ ಮಳೆಯಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬ ನೆಪವನ್ನು ಇಂಜಿನಿಯರ್‌ಗಳು ನೀಡಿದ್ದಾರೆ. ಈ ರೀತಿ ಕುಂಟುನೆಪ ಹೇಳದೆ ನಾಗರಿಕರಿಗೆ ತೊಂದರೆ ನೀಡದೆ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯ ನಾಗರಿಕ ಸಂಘಟನೆ ಹಾಗೂ ವರ್ತಕರ ಸಂಘಟನೆಗಳು ಪಾಲಿಕೆಗೆ ಮನವಿ ಮಾಡಿದೆ.
ಕಸಾಪ ಕಚೇರಿ ಬಳಿ ಕೆಲಸ ಸ್ಥಗಿತ:
ಇಡೀ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಮೊದಲ ವೈಟ್ ಟಾಪಿಂಗ್ ಕಾಮಗಾರಿಯನ್ನು ಪಂಪ ಮಹಾಕವಿ ರಸ್ತೆಯಲ್ಲಿ ಆರಂಭಿಸಲಾಗಿದೆ. ಈಗಲೂ ಯುಟಿಲಿಟಿ ಸ್ಥಳಾಂತರಿಸುವ ಕಾರ್ಯ ಪೂರ್ಣವಾಗದೆ ಕಾಮಗಾರಿ ಕುಂಟುತ್ತಿದೆ. ಇದರಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದು ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಮಂಡ್ಯ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಹಲವು ಸಾಹಿತಿಗಳು ಹಾಗೂ ಸಂಘಟಕರು ವಿವಿಧ ಜಿಲ್ಲೆಗಳಿಂದ ಬಂದುಹೋಗುತ್ತಿದ್ದು, ವಾಹನ ನಿಲ್ಲಿಸಲು ಪರದಾಡುವಂತಾಗಿದೆ. ಇದೇ ರೀತಿಯ ಸಮಸ್ಯೆ ಮಕ್ಕಳಕೂಟ ಹಾಗೂ ಅಪೆಕ್ಸ್ ಬ್ಯಾಂಕ್ ಕಚೇರಿಗೆ ಬರುವವರನ್ನು ಕಾಡುತ್ತಿದೆ.
ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯಾರೂ ಅಡ್ಡಿಯಿಲ್ಲ. ಆದರೆ, ಸರಿಯಾಗಿ ಕಾಮಗಾರಿ ನಡೆಸದೆ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ರಸ್ತೆಅಗೆತದ ಬಳಿಕ ಮಣ್ಣನ್ನು ಸಮರ್ಪಕವಾಗಿ ಮುಚ್ಚದೆ ಹಾಗೆ ಬಿಡುವುದರಿಂದ ವಾಹನಗಳ ಹಳ್ಳದಲ್ಲಿ ಸಿಲುವಂತಾಗಿವೆ. ನಾಗರಿಕರಿಗೆ ತೊಂದರೆ ಆಗದ ರೀತಿ ಕಾಮಗಾರಿ ನಡೆಸಲು ಪಾಲಿಕೆ ಗಮನಹರಿಸಲಿ.
- ಎಸ್.ಎಸ್.ನಾಗಪ್ಪ, ವ್ಯಾಪಾರಿ
ಕೊಳವೆ ಅಳವಡಿಸಲು 2-3 ಬಾರಿ ರಸ್ತೆ ಅಗೆಯುವುದರಿಂದ ನಮ್ಮ ಮನೆಗಳಿಂದ ವಾಹನಗಳನ್ನು ಹೊರಗೆ ತರಲು ಸಾಧ್ಯವಾಗುತ್ತಿಲ್ಲ. ಕೆಲಸವನ್ನು ಸಮರ್ಪಕವಾಗಿ ಮಾಡದ ಕಾರಣ ಜನರಿಗೆ ವಿನಾಕಾರಣ ತೊಂದರೆ ಆಗಿದೆ. ಹಿರಿಯ ನಾಗರಿಕರು ಓಡಾಡಲು ಕಷ್ಟವಾಗುತ್ತಿದೆ. ಪಾಲಿಕೆ ಸೂಕ್ತ ಮೇಲ್ವಿಚಾರಣೆ ನಡೆಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿ.
- ಮಹೇಶ್, ನಿವಾಸಿ