ಬೈತಡ್ಕ ರಸ್ತೆ ದುರಸ್ತಿಗೊಳಿಸದೆ ನಿರ್ಲಕ್ಷ್ಯ : ಭಾರಿ ಮಳೆಗೆ ಮಾರ್ಗ ಕುಸಿತ: ತಿಂಗಳಾದರೂ ಆರಂಭವಾಗದ ರಿಪೇರಿ

New Project (22)
Published on

ವಿಜಯವಾಣಿ ಸುದ್ದಿಜಾಲ ಕಡಬ

ಸುಮಾರು ಒಂದೂವರೆ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಪುತ್ತೂರು-ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ಬೈತಡ್ಕ ರಸ್ತೆ ಕುಸಿದಿದ್ದು, ಇನ್ನೂ ದುರಸ್ತಿಗೆ ಮೀನಮೇಷ ಎಣಿಸಲಾಗುತ್ತಿದೆ. ಮತ್ತಷ್ಟು ಕುಸಿಯುವ ಆತಂಕವಿದ್ದು, ಈ ಕುರಿತು ಸ್ಥಳೀಯಾಡಳಿತ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಹೆದ್ದಾರಿ ಕುಸಿದ ಕೆಳಭಾಗದಲ್ಲಿ ಹಾದುಹೋಗುತ್ತಿರುವ ತೋಡಿಗೆ ಹೆದ್ದಾರಿಯ ಮಣ್ಣು ಬಿದ್ದಿದ್ದು, ತೆರವುಗೊಳಿದೇ ಇರುವುದರಿಂದ ತೋಡಿನ ನೀರು ಸಮೀಪದ ಕೃಷಿ ತೋಟಗಳಿಗೆ ಹರಿದು ಬೆಳೆಹಾನಿಗೂ ಕಾರಣವಾಗಿದೆ.

ತಾತ್ಕಾಲಿಕ ಕ್ರಮ: ಕುಸಿತಗೊಂಡ ರಸ್ತೆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ಸಿಮೆಂಟ್ ಇಟ್ಟಿಗೆಯ ತಡೆ ನಿರ್ಮಿಸಲಾಗಿದ್ದು, ಆ ಭಾಗದಲ್ಲಿ ವಾಹನಗಳು ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಹಾಗಾಗಿ ವಾಹನ ಸಂಚಾರಕ್ಕೆ ಈ ರಸ್ತೆ ಕಿರಿದಾಗಿದ್ದು, ಇನ್ನಷ್ಟು ಕುಸಿತಗೊಂಡರೆ ಈ ಮಾರ್ಗವಾಗಿ ಹೆದ್ದಾರಿ ಸಂಪರ್ಕ ಶಾಶ್ವತವಾಗಿ ಇಲ್ಲವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಹಾಗೂ ಶೀಘ್ರ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದು, ಮಣ್ಣು ಕುಸಿತ ತಡೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣವೇ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಸಕರಿಂದ ಪರಿಶೀಲನೆ

ಹೆದ್ದಾರಿ ಕುಸಿತಗೊಂಡ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಇತ್ತೀಚೆಗೆ ಭೇಟಿ ಪರಿಶೀಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಶೀಘ್ರವೇ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಬೈತಡ್ಕ ಎಂಬಲ್ಲಿ ಹೆದ್ದಾರಿ ಕುಸಿತಗೊಂಡಿದ್ದು, ಪ್ರಾಕೃತಿಕ ವಿಕೋಪದಡಿಯಲ್ಲಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕುಸಿದ ಸ್ಥಳದಲ್ಲಿ ಇಟ್ಟಿಗೆ ಗೋಡೆ ಕಟ್ಟಲಾಗಿದೆ. ಎಲ್.ಸಿ ಸಿಕ್ವೇರ, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಕಾಣಿಯೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈತಡ್ಕ ಎಂಬಲ್ಲಿ ಜರಿದ ಹೆದ್ದಾರಿಯ ಮಣ್ಣು ತೋಡಿಗೆ ಬಿದ್ದು ನೀರು ಹರಿವಿಗೆ ತೊಂದರೆಯಾಗಿದೆ. ತಿಂಗಳು ಕಳೆದರೂ ಮಣ್ಣು ತೆರವುಗೊಳಿಸಲಿಲ್ಲ. ಈಗ ತೋಡಿನ ನೀರು ತೋಟಗಳಿಗೆ ಹರಿದು ಬೆಳೆ ಹಾನಿಯಾಗಿದೆ. ಕುಸಿದ ಹೆದ್ದಾರಿ ದುರಸ್ತಿಯಾದ ಮೇಲೆ ಗ್ಯಾರಂಟಿ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಗದೀಶ್ ಅಗಳಿ, ಸ್ಥಳೀಯ

  • ತಿಂಗಳು ಉರುಳಿದರೂ ದುರಸ್ತಿಗೊಳಿಸದೇ ನಿರ್ಲಕ್ಷೃ
  • ಹೆದ್ದಾರಿಯ ಮಣ್ಣು ಬಿದ್ದು ತೋಡು ಬ್ಲಾಕ್
  • ಮುನ್ನೆಚ್ಚರಿಕೆ ಕ್ರಮವಾಗಿ ಇಟ್ಟಿಗೆ ಕೋಟೆ ನಿರ್ಮಾಣ
  • ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ಪಟ್ಟು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net