ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ರಸ್ತೆ ತಡೆ

raichur
raichur
Published on

ರಾಯಚೂರು ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಬರುವ ಹಳ್ಳಿಗಳಿಗೆ ವೇಗದೂತ ಬಸ್‌ಗಳು ನಿಲುಗಡೆ ಮಾಡುವಂತೆ ಒತ್ತಾಯಿಸಿ ಗುರುವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಾಲೂಕಿನ ತುಂಟಾಪೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಕಳೆದ ಎರಡು ವರ್ಷಗಳಿಂದ ರಾಯಚೂರು ಮಂತ್ರಾಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮದಗಳಾದ ತುಂಟಾಪುರ, ಮಂಜರ್ಲಾ ಕ್ರಾಸ್, ಗುಂಜಹಳ್ಳಿ, ಹಂಚಿನಾಳ, ಕೆರೆ ಬೂದೂರು, ಮತ್ತು ತುಂಗಭದ್ರಾ ಗ್ರಾಮಗಳಲ್ಲಿ ವೇಗದೂತ ಮತ್ತು ಇತರೆ ಬಸ್‌ಗಳಿಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಬೆಳಗ್ಗೆ ಮಧ್ಯಾಹ್ನ, ಮತ್ತು ಸಂಜೆ ಶಾಲಾ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿತ್ತು,

ಎರಡು ದಿನ ಬಸ್ ನಿಲುಗಡೆ ಮಾಡಿದ್ದು, ಮತ್ತೆ ಯತಾಸ್ಥಿತಿ ಮುಂದುವರೆಸಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು. ಈಗಾಗಲೇ ಕೆಕೆಆರ್‌ಟಿಸಿ ಕಲಬುರಗಿ ವಿಭಾಗಕ್ಕೆ ಮನವಿ ಮಾಡಲಾಗಿದೆ. ರಾಯಚೂರನಿಂದ ಮಂತ್ರಾಲಯಕ್ಕೆ ಪ್ರತಿದಿನ 84 ಬಸ್‌ಗಳು ಸಂಚಾರಕ್ಕೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ಆದರೆ ರಾಯಚೂರು ವಿಭಾಗೀಯ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದು, 84 ಬಸ್‌ಗಳು ಮಂತ್ರಾಲಯ ಮಾರ್ಗವಾಗಿ ಎಲ್ಲೆಲ್ಲಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹಳ್ಳಿಗಳಲ್ಲಿ ಬಸ್ ನಿಲುಗಡೆ ಮಾಡದೇ ಇರುವುದರಿಂದ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ವೃದ್ಧರು, ಅಂಗವಿಕಲರು, ಮತ್ತು ರೋಗಿಗಳು ಆಸ್ಪತ್ರೆಗೆ ತೆರಳು ಅನಾನುಕೂಲವಾಗಿದೆ, ಸಮಯಕ್ಕೆ ಬಸ್ ಇಲ್ಲದೆ ಇರುವುದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ವಿದ್ಯಾರ್ಥಿಗಳು ಆಟೋ, ಬೈಕ್ ಸಹಾಯದಿಂದ ಶಾಲಾ ಕಾಲೇಜುಗಳಿಗೆ ತೆರಳಿವ ಪರಿಸ್ಥಿತಿ ಉಂಟಾಗಿದೆ, ಸಾಕಷ್ಟು ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಸ್ ಮಾಡಿಕೊಂಡಿದ್ದು ವ್ಯರ್ಥವಾಗಿದೆ, ಸರಿಯಾಗಿ ಬಳಕೆಯಾಗದೇ ನಿರುಪಯುಕ್ತವಾಗಿದೆ ಎಂದು ಆಪಾದಿಸಿದರು. ನಂತರ ಕೆಕೆಆರ್‌ಟಿಸಿ ನಿಗಮದ ಜಿಲ್ಲಾ ನಿಯಂತ್ರಣಾಧಿಕಾರಿ ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಲಾಯಿತು. ರಸ್ತೆ ತಡೆಯಿಂದ, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಂಜಿತ್ ದಂಡೋರಾ, ದುಳ್ಳಯ್ಯ ಗುಂಜಳ್ಳಿ, ಜಕ್ರಪ್ಪ ಹಂಚಿನಾಳ, ಹನುಮಂತು ಜುಲಮಗೇರಾ, ಭೀಮೇಶ ತುಂಟಾಪೂರ, ಅನಿಲ್ ಕುಮಾರ, ಮಾರುತಿ, ನಾಗರಾಜ,

ಸುಧಾಕರ, ಗ್ರಾಮಸ್ಥರಾದ ಭೀಮನಾಯಕ, ತಾಯಪ್ಪ, ಈರೇಶ, ರಾಜಪ್ಪ, ಶಿವಪ್ಪ, ಇಂಜಪ್ಪ, ಆನಂದ ನಾಯಕ, ರಾಜಪ್ಪ ಮರ್ಚಟಾಳ್, ದಾವೀದ್ ಮರ್ಚಟಾಳ್, ಸಲ್ಕೋನ್, ಮಾರುತಿ, ಶಿವರಾಜ ಜಂಬಲದಿನ್ನಿ, ಹನುಮಂತ, ಸುನಂದ, ನರಸಿಂಹಲು, ಯಲ್ಲಪ್ಪ, ಹನುಮಂತ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net