ಹಂತ ಹಂತವಾಗಿ ರಸ್ತೆ, ಚರಂಡಿ ಕಾಮಗಾರಿ ಪೂರ್ಣ

AUGUST-2025-30-02 VV
ಮದ್ದೂರು ತಾಲೂಕಿನ ನೀಲಕಂಠನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಭೂಮಿಪೂಜೆ ನೆರವೇರಿಸಿದರು. ಪಿ.ಸಂದರ್ಶ, ಚಲುವರಾಜು, ಸುರೇಶ್, ಕುಮಾರ್, ಬೋರಯ್ಯ, ಆನಂದ್, ಸಿದ್ದರಾಜು, ಮಾದೇಶ ಇದ್ದರು.
Published on

ಮದ್ದೂರು : ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಎರಡು ದಶಕಗಳಿಂದಲೂ ಸಂಚಾರಕ್ಕೆ ಯೋಗ್ಯವಿಲ್ಲದ ಸ್ಥಿತಿಗೆ ತಲುಪಿದ್ದು ಇವುಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಅಗತ್ಯವಿರುವೆಡೆ ಮಳೆನೀರು ಚರಂಡಿಗಳನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ ತಿಳಿಸಿದರು.

ತಾಲೂಕಿನ ನೀಲಕಂಠನಹಳ್ಳಿ ಗ್ರಾಮ ಪರಿಮಿತಿಯಲ್ಲಿ 25 ಲಕ್ಷ ರೂ. ವೆಚ್ಚದ ಸಿ.ಸಿ.ಚರಂಡಿ ಮತ್ತು ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅರ್ಧಕ್ಕೆ ನಿಂತಿರುವ ಗ್ರಾಮದ ಸಮುದಾಯ ಭವನ ಪೂರ್ಣಗೊಳಿಸಲು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಅವರ ಅನುದಾನದಲ್ಲಿ 10 ಲಕ್ಷ ರೂ.ಗಳು ಮತ್ತು ಇತರ ಬಾಬ್ತು 10 ಲಕ್ಷ ರೂ. ಒಟ್ಟು 20 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಿರುವುದಾಗಿ ಪ್ರಕಟಿಸಿದರು.

ಕೆ.ಹಾಗಲಹಳ್ಳಿ ಗ್ರಾಮದ ಮಳೆನೀರು ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣದ 30 ಲಕ್ಷ ರೂ. ಅನುದಾನ ಕಾಮಗಾರಿ ಹಾಗೂ ತಾಲೂಕಿನ ಭೀಮನಕೆರೆ ಗ್ರಾಮದಿಂದ ಬೆಟ್ಟದರಸಮ್ಮ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ. ವೆಚ್ಚದ ಯೋಜನೆಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮುಖಂಡರಾದ ಸುರೇಶ್, ಕುಮಾರ್, ಬೋರಯ್ಯ, ಆನಂದ್, ಸಿದ್ದರಾಜು, ಮಾದೇಶ, ಪುಟ್ಟರಾಮು, ರಾಜು, ಕೆಂಪೇಗೌಡ, ಚಿಕ್ಕಮೊಗ, ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ರವೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net