

ಗುಂಡ್ಲುಪೇಟೆ: ತಾಲೂಕಿನ ಎ.ಶೆಟ್ಟಹಳ್ಳಿ ಗ್ರಾಮದ ಸಾಮಾನ್ಯ ವರ್ಗದವದ ಬೀದಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು.
ಮಳೆಹಾನಿಗೊಳಗಾದ ಪ್ರದೇಶಾಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿರುವ ಅನುದಾನದಲ್ಲಿ ಆಯ್ದ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನಕ ಭವನ ಸೇರಿದಂತೆ ಗ್ರಾಮಸ್ಥರ ಬೇಡಿಕೆಯಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಗ್ರಾಮಪಂಚಾಯಿತಿ ಸದಸ್ಯರಾದ ಬಸವರಾಜು, ಶಿವು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಮುಖಂಡರಾದ ಟಿ.ಪಿ.ನಾಗರಾಜು, ಹೋಟೆಲ್ ಚಿನ್ನಸ್ವಾಮಪ್ಪ, ಕುಮಾರ್, ಮನು, ಸರ್ಪಭೂಷಣಸ್ವಾಮಿ, ಟಿ.ಎನ್.ಶಿವಶೇಖರ್, ನಿಖಿಲ್ ಇತರರಿದ್ದರು.