ರಸ್ತೆ ಅಪಘಾತ, ಚಿಕಿತ್ಸೆ ಫಲಿಸದೆ ಓರ್ವ ಸಾವು

Accident
Published on

ನಿಪ್ಪಾಣಿ: ನಗರದಲ್ಲಿ ಸೋಮವಾರ ಕಂಟೇನರ್ ಮತ್ತು ಬೈಕ್ ಮಧ್ಯೆ ಜರುಗಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಂಗಾರಾಮ ರಾಮು ಬರಾಟೆ (64) ಸಾವನ್ನಪ್ಪಿದ್ದಾರೆ. ನಗರದ ಹೊರವಲಯದಲ್ಲಿರುವ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಡೈಮಂಡ್ ಹೋಟೆಲ್ ಬಳಿ ಜರುಗಿದ ಅಪಘಾತದಲ್ಲಿ ಕೊಲ್ಲಾಪುರ ಜಿಲ್ಲೆಯ ಆಜರಾ ತಾಲೂಕಿನ ಸುಳೆ ಗ್ರಾಮದ ವಿಮಲಾ ಗಂಗಾರಾಮ ಬರಾಟೆ (60)(ಪತ್ನಿ) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಪತಿ ಗಂಗಾರಾಮ ಅವರಿಗೆ ಎಂಜಿಎಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಕೊಲ್ಲಾಪುರದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net