ರಸ್ತೆ ಅಪಘಾತದಲ್ಲಿ ಸವಾರ ಸಾವು, ನಾಲ್ವರಿಗೆ ಗಾಯ

Maski Accident
ಮಸ್ಕಿ ತಾಲೂಕಿನ ಮುದಬಾಳ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಟಾಟಾ ಏಸ್ ವಾಹನವು ಟಿಸಿ ಕಂಬಕ್ಕೆ ಡಿಕ್ಕಿ ಹೊಡೆದಿರುವುದು.
Published on

ಮಸ್ಕಿ: ಇಲ್ಲಿನ ಲಿಂಗಸುಗೂರು ರಸ್ತೆಯ ಮುದಬಾಳ ಕ್ರಾಸ್ ಬಳಿ ಭಾನುವಾರ ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಬುದ್ದಿನ್ನಿ (ಎಸ್) ಗ್ರಾಮದ ಯುವಕ ವಿಜಯಕುಮಾರ (20) ಮೃತ. ಹಿಂಬದಿ ಸವಾರ ವರುಣ ಗಾಯಗೊಂಡಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಯಿತು.

ಟಾಟಾ ಏಸ್‌ನಲ್ಲಿದ್ದ ಐವರ ಪೈಕಿ ಮೂವರಿಗೆ ತೀವ್ರ ಗಾಯಗಳಾಗಿದ್ದು, ರಾಯಚೂರಿನ ರಿಮ್ಸ್‌ಗೆ ದಾಖಲಿಸಲಾಗಿದೆ. ಬುದ್ದಿನ್ನಿಯಿಂದ ಲಿಂಗಸುಗೂರಿನತ್ತ ಹೊರಟ್ಟಿದ್ದ ಬೈಕ್ ಮತ್ತು ಲಿಂಗಸುಗೂರಿನಿಂದ ಮಸ್ಕಿಗೆ ಹೊರಟ್ಟಿದ್ದ ಟಾಟಾ ಏಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಟಾಟಾ ಏಸ್ ವಾಹನ ರಸ್ತೆ ಬದಿಯ ಟಿಸಿ ಕಂಬಕ್ಕೆ ಗುದ್ದಿ ನಿಂತಿದೆ. ಈ ಕುರಿತು ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ 108 ಆಂಬುಲೆನ್ಸ್ ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಸ್ಟಾಫ್ ನರ್ಸ್ ಮೌನೇಶ, ಚಾಲಕ ಸಿದ್ದಪ್ಪ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಗಾಯಳುಗಳನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಆಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net