

ಶಿವಮೊಗ್ಗ: ತಾಲೂಕಿನ ಕುಂಸಿ ಸಮೀಪದ ತುಪ್ಪೂರಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾಜಿ ಸೈನಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಪತ್ನಿ ಮತ್ತು ಪುತ್ರಿ ಗಾಯಗೊಂಡಿದ್ದಾರೆ.
ಹೊಸನಗರ ತಾಲೂಕಿನ ಮಾವಿನಹೊಳೆ ಗ್ರಾಮದ ನಿವಾಸಿ, ಮಾಜಿ ಸೈನಿಕ ಚಿನ್ನಪ್ಪ (50) ಮೃತರು. ಗಾಯಗೊಂಡಿರುವ ಪತ್ನಿ ಮತ್ತು ಪುತ್ರಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಿನ್ನಪ್ಪ ಅವರ ಪುತ್ರಿ ಪಾಲ್ಗೊಂಡಿದ್ದರು. ಅದಕ್ಕಾಗಿ ಕಾರಿನಲ್ಲಿ ಕುಟುಂಬದವರು ತೆರಳಿದ್ದರು.
ಶನಿವಾರ ಕ್ರೀಡಾಕೂಟ ಮುಗಿಸಿ ವಾಪಸ್ ಬರುವಾಗ ತುಪ್ಪೂರು ಬಳಿ ಕಾರು ಮರಕ್ಕೆ ಡಿಕ್ಕಿಯಾಗಿ ಚಿನ್ನಪ್ಪ ಮೃತಪಟ್ಟಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.