ರಸ್ತೆ ಅಪಘಾತದಲ್ಲಿ ಬಾಲಕ ಸಾವು

accident
Published on

ಶಿರಗುಪ್ಪಿ: ವಾಯುವಿಹಾರಕ್ಕೆ ತೆರಳಿದ್ದ 6 ಯುವಕರಿಗೆ ಅಪರಿಚಿತ ವಾಹನ (ಟೆಂಪೋ) ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಸ್ಥಳದಲ್ಲಿ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಬಾಕಿ ನಾಲ್ವರಿಗೆ ಸಣ್ಣ-ಪುಟ್ಟು ಗಾಯಗಳಾಗಿರುವ ಘಟನೆ ಶಿರಗುಪ್ಪಿ -ಉಗಾರ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಶಿರಗುಪ್ಪಿ ಗ್ರಾಮದ ಸುಶಾಂತ ಸಿದ್ದಪ್ಪ ಢೇಂಗಿ (15) ಮೃತ ಬಾಲಕ. ರಮ್ಜಾನ್ ಮುಜಾವರ (21) ಎಂಬ ಯುವಕನಿಗೆ ಗಂಭೀರ ಗಾಯವಾಗಿದೆ. ಇತರ ಗಾಯಾಳುಗಳನ್ನು ಶಿರಗುಪ್ಪಿ ಹಾಗೂ ಜುಗುಳ ಗ್ರಾಮದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಂಪೋ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net