ರಸ್ತೆ ವಿಸ್ತರಣೆಗೆ ಮನೆಗಳ ತೆರವು ; ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸಲು ದಾರಿ

08TMK_PALIKE_Teravu
Published on

ತುಮಕೂರು : ನಗರದ 35ನೇ ವಾರ್ಡ್ ಸಾಬರಪಾಳ್ಯದ ಖಾದರ್‌ನಗರದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಮನೆಗಳ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಶುಕ್ರವಾರ ಬೆಳಗ್ಗೆಯೇ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತು ಪಾಲಿಕೆ ಆಯುಕ್ತೆ ರೇಣುಕ ನೇತೃತ್ವದಲ್ಲಿ ಜೆಸಿಬಿಗಳು ಘರ್ಜಿಸಲಾರಂಭಿಸಿದ್ದವು, ಪಾಲಿಕೆ ಸಿಬ್ಬಂದಿ ಮನೆಗಳ ತೆರವು ಕಾರ್ಯಾಚರಣೆ ನಡೆಸಿದರು.

ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಬಟವಾಡಿಯಿಂದ ರೋಟಿರ್‌ವರೆಗೆ ರಸ್ತೆ ಅಭಿವೃದ್ಧಿ ಬಹಳ ದಿನಗಳಿಂದ ನನೆನಗುದಿಗೆ ಬಿದ್ದಿತ್ತು. ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಮಹಾನಗರಪಾಲಿಕೆಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳ ಮನವೊಲಿಸಿ ಅವರಿಗೆ ಪರಿಹಾರದ ಭರವಸೆ ನೀಡಿದ್ದರಿಂದ ಅವರೇ ಸ್ವಯಂಪ್ರೇರಿತವಾಗಿ ಮನೆ ಖಾಲಿ ವಾಡಿ ರಸ್ತೆ ವಿಸ್ತರಣೆಗೆ ಸಹಕರಿಸಿದ್ದಾರೆ ಎಂದರು.

ತುಮಕೂರಿನಲ್ಲಿ ಬೆಳಗುಂಬ, ಮೆಳೇಕೋಟೆ ರಸ್ತೆ ಅಗಲೀಕರಣ ಆಗಿದ್ದು, ಈ ರಸ್ತೆ ಬಾಕಿ ಇತ್ತು. ಇಲ್ಲಿನ ಕೆಲವು ಮನೆಗಳನ್ನು ತೆರವುಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಇಲ್ಲಿನ ನಾಗರಿಕರನ್ನು ಭೇಟಿ ವಾಡಿ ಅವರ ಮನವೊಲಿಸಲಾಗಿದೆ. ಅವರಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ಪರಿಹಾರ ನೀಡಲಾಗುವುದು ಎಂದರು.

ಆಯುಕ್ತೆ ರೇಣುಕಾ ಮಾತನಾಡಿ, ಲೋಕೋಪಯೋಗಿ ಇಲಾಖೆ ವತಿಯಿಂದ 5 ಕೋಟಿ ರೂ.ವೆಚ್ಚದಲ್ಲಿ ರಿಂಗ್ ರಸ್ತೆಯಿಂದ ಬಿ.ಎಚ್.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಭಾಗದ 24 ಮನೆಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿವೆ. ಆ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.

ಇಲ್ಲಿರುವ 24 ಮನೆಗಳಲ್ಲಿ 8 ಮನೆಗಳಿಗೆ ವಾತ್ರ ಖಾತೆ ಇದೆ, ಉಳಿದ ಮನೆಗಳಿಗೆ ಖಾತೆಯಿಲ್ಲ, ಆದರೆ ದಾಖಲೆಗಳಿವೆ. ಎಲ್ಲರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಅತಿ ಶ್ರೀದಲ್ಲಿ ಪರಿಹಾರ ವಿತರಿಸಲಾಗುವುದು ಎಂದರು. ಪಾಲಿಕೆ 20 ನೇ ವಾರ್ಡ್ ಸದಸ್ಯ ಎ.ಶ್ರೀನಿವಾಸ್, ಮುಖಂಡ ಇವ್ರಾನ್ ಪಾಷ ಮತ್ತಿತರರು ಇದ್ದರು.

ಪರಿಹಾರ ನೀಡದೆ 24 ಮನೆ ತೆರವು: ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ 24 ಮನೆಗಳನ್ನು ತೆರವುಗೊಳಿಸಲಾಗಿದ್ದು ಯಾರೊಬ್ಬರಿಗೂ ನಯಾಪೈಸೆ ಪರಿಹಾರ ನೀಡದಿರುವುದು ಆಶ್ಚರ್ಯ ಮೂಡಿಸಿದೆ. ಪಾಲಿಕೆ ಅಧಿಕಾರಿಗಳ ಭರವಸೆಯನ್ನೇ ನಂಬಿ ಜನರು ಮನೆ ತೆರವುಗೊಳಿಸಲು ಅವಕಾಶ ನೀಡಿದ್ದಾರೆ. ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 80 ಅಡಿ ರಸ್ತೆ ನಿರ್ಮಿಸುವ ಪ್ರಸ್ತಾಪ ಕೈಬಿಟ್ಟು 70ಅಡಿ ರಸ್ತೆ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net