ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

road
Published on

ಕುಶಾಲನಗರ:

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾರಂಗಿ ಚಿಕ್ಕತ್ತೂರಿನ ನಡುವೆ ಇರುವ ಮಾರಿಯಪ್ಪ ದೇವಾಲಯದ ಮುಂಭಾಗದಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿ ಮತ್ತು ನೂತನ ಸೇತುವೆ ನಿರ್ಮಾಣದ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಸರಪಳಿ 0.480 ಕಿ.ಮೀ.ನಲ್ಲಿನ ಸೇತುವೆಯ ಮರು ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಈಗಿರುವ ಸೇತುವೆಯ ಅಗಲ 6 ಮೀ ಆಗಿದೆ. ಪ್ರಸ್ತಾಪಿತ ಸೇತುವೆಯ ಅಗಲ 7.50 ಮೀ. ಇರಲಿದೆ. ಈಗಿರುವ ಸೇತುವೆಯ ಎತ್ತರ 2.40 ಮೀ. ಆಗಿದ್ದು ಹಳ್ಳದ ತಳಮಟ್ಟದಿಂದ ಪ್ರಸ್ತಾಪಿಸಿತ ಸೇತುವೆಯ ಎತ್ತರ 4.45 ಮೀ. ಇರಲಿದೆ.

ಮಳೆಗಾಲದಲ್ಲಿ ಪ್ರಸ್ತುತ ಸೇತುವೆಯ ಮಟ್ಟದಿಂದ 5 ಅಡಿಗಳಷ್ಟು ಎತ್ತರಕ್ಕೆ ನೀರು ಹರಿದು ವಾಹನ ಹಾಗೂ ಜನ ಸಂಪರ್ಕ ಸಂಪೂರ್ಣ ಬಂದ್ ಆಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕಾಂಗ್ರೆಸ್ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಸಾಜಿ. ಶಿವಶಂಕರ್, ನೀರಾವರಿ ಇಲಾಖೆ ಅಭಿಯಂತರ ಪುಟ್ಟಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net