

ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಮೆಟ್ರೋ ರೈಲು ಸೇವೆ ಮಾದರಿಯಲ್ಲಿಯೇ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡಿರುವ ಐಷಾರಾಮಿ, ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೋಮವಾರ ಬೆಳಗಾವಿಗೆ ಆಗಮಿಸಿತು.
ಮಹಾರಾಷ್ಟ್ರದಿಂದ ಪುಣೆ, ಮಿರಜ್ , ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟ ವಂದೇ ಭಾರತ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬರಮಾಡಿಕೊಂಡರು. ಸಂಸದ ಜಗದೀಶ ಶೆಟ್ಟರ್, ಹಾಲಿ, ಮಾಜಿ ಶಾಸಕರು ಇದ್ದರು..
ಮಹಾರಾಷ್ಟ್ರ ಕರ್ನಾಟಕ ನಡುವೆ ಸೋಮವಾರ ದಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಗೆ ಪ್ರಯಾಣದ ಹೊಸ ತಂತ್ರಜ್ಞಾನವನ್ನು ತೋರಿಸಿದೆ. ಈ ಸೆಮಿ ಹೈ ಸ್ಪೀಡ್ ರೈಲು ಇದು ಶತಾಬ್ದಿ ಎಕ್ಸ್ ಪ್ರಸ್ ಗಿಂತ ಹೆಚ್ಚು ವೇಗವಾಗಿ ಚಲಿಸುತ್ತದೆ ಎನ್ನಲಾಗಿದೆ.