

ಬೆಳಗಾವಿ: ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಾನ ಮಹಾವಿದ್ಯಾಲಯದ ವಿದ್ಯಾರ್ಥಿ ದೇವೆನ್ ವಿನೋದ ಬಾಮಣೆ ಸ್ಟೇಟಿಂಗ್ನಲ್ಲಿ ವಿಶ್ವ ಚಾಂಪಿಯನ್ಶಿಪ್ಗೆ ಹಾಗೂ ಲತಾ ಜಂಗಟಿ ಏಷಿಯನ್ ಡಾಡ್ಜ್ ಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಸೌಥ್ ಕೊರಿಯಾದ ಜೆಕೆನ್ಸಿ ನಗರದಲ್ಲಿ ಜರುಗಿದ ಏಷಿಯನ್ ಗೇಮ್ 2025 ಕ್ರೀಡಾಕೂಟದ ಸ್ಕೇಟಿಂಗ್ನಲ್ಲಿ ದೇವೆನ್ ಬಾಮಣೆ 9ನೇ ಸ್ಥಾನ ಪಡೆದುಕೊಂಡಿದ್ದಾನೆ. ಒಟ್ಟು 15 ರಾಷ್ಟ್ರಗಳು ಭಾಗಿಯಾಗಿದ್ದ ಈ ಪಂದ್ಯಾವಳಿಯಲ್ಲಿ ಭಾರತ ದೇಶದಿಂದ ಆಯ್ಕೆಯಾದ 3 ಸ್ಕೇರ್ಟಸ್ಗಳಲ್ಲಿ ಒಬ್ಬನಾಗಿದ್ದಾನೆ. ಈ ಮೂಲಕ ಚೀನಾದಲ್ಲಿ ನವೆಂಬರ್ ಮತ್ತು ಡಿಸೆಂಬರ್ ಮಧ್ಯೆ ಆಯೋಜಿಸಿರುವ ವಿಶ್ವ ಚಾಂಪಿಯನ್ಶಿಪ್ನ ಸ್ಲಾ$್ಯಲೊಮ್ (ಫ್ರೀ ಸ್ಟೆಲ್ ಸ್ಕೇಟಿಂಗ್) ವಿಭಾಗದಲ್ಲಿ ಆಯ್ಕೆಯಾಗಿದ್ದಾನೆ.
ಡಾಡ್ಜ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಡಾಡ್ಜ್ ಚಾಂಪಿಯನ್ ಶಿಪ್ನಲ್ಲಿ ಲತಾ ಜಂಗಟಿ ಅತ್ಯುತ್ತಮ ಪ್ರದರ್ಶನ ನೀಡಿ, ಜಪಾನಿನ ಚೀಬಾ ನಗರದಲ್ಲಿ ಸೆ.27 ಹಾಗೂ 28ರಂದು ಜರುಗಲಿರುವ ಏಷಿಯನ್ ಡಾಡ್ಜ್ ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾಳೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ಕೆಎಲ್ಇ ಸಂಸ್ಥೆ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಹಾಗೂ ಸರ್ವ ಸದಸ್ಯರು, ಆಜೀವ ಸದಸ್ಯರು, ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯ ಮತ್ತು ಸದಸ್ಯರು, ಪ್ರಾಚಾರ್ಯ ವಿ.ಸಿ. ಕಾಮಗೋಳ, ಉಪಪ್ರಾಚಾರ್ಯರು, ಬೋಧಕ& ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.