ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

5 Dwd 9
Published on

ಧಾರವಾಡ: ವೈಜ್ಞಾನಿಕ ಜಾಗೃತಿಯಿಂದ ಜ್ಯೋತಿಷ್ಯ, ಮಾಟ- ಮಂತ್ರದAಥ ಮೌಢ್ಯಗಳಿಂದ ಹೊರಬರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿರಿಯ ವರ್ತಕ ಶಿವಶಂಕರ ಹಂಪಣ್ಣವರ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಆವಿಷ್ಕಾರ' ಅಂತರ ಶಾಲಾ ವಿಜ್ಞಾನ ಮೇಳ ಹಾಗೂ ಮಾದರಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಿಜವಾದ ಜ್ಞಾನ ಪಠ್ಯಪುಸ್ತಕಗಳಿಂದ ಬರುವುದಿಲ್ಲ. ಹೀಗಾಗಿಯೇ ನಮ್ಮ ಹಿರಿಯರು ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂದಿದ್ದಾರೆ. ಅರಿವೇ ಜ್ಞಾನದ ಮೂಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಅನುಭವ ಕಲಿಕೆಗಿಂತ ದೊಡ್ಡದು. ವಿದ್ಯಾರ್ಥಿಗಳು ಗುರಿ ಸಾಽಸುವ, ಸವಾಲುಗಳÀನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ರೂಪಿಸಿದ ವಿಜ್ಞಾನದ ಮಾದರಿಗಳು ಗಮನ ಸೆಳೆದವು. ಡ್ರೋನ್ ಆಧಾರಿತ ಬೆಳೆ ನಿರ್ವಹಣೆ, ಸ್ವಯಂಚಾಲಿತ ಭದ್ರತಾ ಸ್ನೇಹಿ ರಸ್ತೆ, ಸ್ವಯಂಚಾಲಿತ ಶೌಚಗೃಹ ಸ್ವಚ್ಛಗೊಳಿಸುವ ಯಂತ್ರ, ಸ್ಮಾರ್ಟ್ ಬೆಂಚ್, ಅನಿಲ ಸೋರಿಕೆ ಎಚ್ಚರಿಕೆಯಂತ್ರ, ಕಳ್ಳತನ ನಿರೋಧಕ ಭದ್ರತಾ ಕಪಾಟು, ಸ್ವಯಂಚಾಲಿತ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಮುಂತಾದ ಮಾದರಿಗಳು ಗಮನ ಸೆಳೆದವು.
ಆರ್‌ಎಲ್‌ಎಸ್ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಗುರುಪಾದಪ್ಪ ಮರಳ್ಳಪ್ಪನವರ, ಅಶೋಕ ಐ. ಚಿಕ್ಕೋಡಿ, ಉಪ ಪ್ರಾಚಾರ್ಯ ವಿ.ಪಿ. ಹಿರೇಮಠ, ಇತರರಿದ್ದರು.
ವೈಷ್ಣವಿ ಗದಗಿನಮಠ ಹಾಗೂ ಸಂಗಡಿಗರು ವಚನಗಾಯನ ಪ್ರಸ್ತುತಪಡಿಸಿದರು. ಪ್ರಾಚಾರ್ಯ ಸಿ.ವಿ. ಕಣಬರ್ಗಿ ಸ್ವಾಗತಿಸಿದÀರು. ಡಾ. ಚಂದ್ರಶೇಖರ ವೈ. ನಿರೂಪಿಸಿದರು. ವೈ.ಪಿ. ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net