ವಕ್ಫ ಹೋರಾಟ ಮುಂದುವರಿಸಲು ಹೈಕಮಾಂಡ್ ಅಸ್ತು; ರಮೇಶ ಜಾರಕಿಹೊಳಿ

jarkiholi-new.jpg
Published on

ಬೆಳಗಾವಿ:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹತಾಶೆ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ರಾಜನಾಥ ಸಿಂಗ್ ಸೇರಿ ಹಲವರನ್ನು ನಾವು ಈಗಾಗಲೇ ಭೇಟಿಯಾಗಿದ್ದೇವೆ. ವಕ್ಪ್ ಹೋರಾಟ ಮುಂದುವರಿಸಿ ಎಂದು ಅವರು ಹೇಳಿದ್ದಾರೆ. ಹಾಗಾಗಿ ಬಳ್ಳಾರಿ, ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ವಿರುದ್ಧ ಹೋರಾಡುತ್ತೇವೆ‌ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರಿ.

ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ವಕ್ಫ್‌ನಿಂದ ಆಸ್ತಿ ಕಬಳಿಕೆ ಕುರಿತಾಗಿ ನಾವು ಕೈಗೊಂಡ ಹೋರಾಟದ ಬಗ್ಗೆ ಕೇಂದ್ರ ಜಂಟಿ ಸದನ ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದೇವೆ. ನಮ್ಮ ಹೋರಾಟಕ್ಕೆ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ‘ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಹುಬ್ಬಳ್ಳಿ, ವಿಜಯಪುರ ಹಾಗೂ ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸಿದರು. ಉಪವಾಸ ಕೈಬಿಟ್ಟು, ಪ್ರವಾಸ ಮಾಡಿ. ನೊಂದ ಜನರನ್ನು ಭೇಟಿಯಾಗಿ ವರದಿ ಸಿದ್ದಪಡಿಸಿ ಎಂದು ಹೇಳಿದರು. ಹಾಗಾಗಿ ಜಿಲ್ಲಾ ಪ್ರವಾಸ ಕೈಗೊಂಡೆವು. ಪ್ರವಾಸಕ್ಕೂ ಮುನ್ನ ವಿಜಯೇಂದ್ರ ಹೇಗೆ ವರದಿ ಕೊಡುತ್ತಾರೆ. ಇದರಿಂದಲೇ ಅವರು ಎಷ್ಟು ಸುಳ್ಳು ಹೇಳುತ್ತಾರೆ ಎಂದು ತಿಳಿಯುತ್ತದೆ’ ಎಂದರು.

‘ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಪ್ ವಿರುದ್ಧದ ಹೋರಾಟ ಮುಂದಿನ ಎರಡು ಜಿಲ್ಲೆಗೆ ಕೊನೆಗೊಳ್ಳಲಿದೆ. ಅವರು ಹೋದ ಕಡೆಯಲ್ಲೆಲ್ಲ ಜನರು ಅವರನ್ನು ಪ್ರಶ್ನಿಸುತ್ತಿದ್ದಾರೆ. ನಾವು ಹೋರಾಟ ಮಾಡಿದ ಕಡೆಗಳಲ್ಲೇ ಮತ್ತೆ ಹೋಗುತ್ತಿದ್ದಾರೆ ಗೊತ್ತಿಲ್ಲ’ ಎಂದು ಹೇಳಿದರು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net