ಅರ್ಥಪೂರ್ಣವಾಗಿ ಜರುಗಿದ ರಾಜಾ ಲಖಮಗೌಡರ 160ನೇ ಜಯಂತಿ ಉತ್ಸವ ಆಚರಣೆ

31RAVIG7KLE-RLS.jpg
Published on

ಬೆಳಗಾವಿ : ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ರಾಜಾ ಲಖಮಗೌಡರ 160ನೇ ಜಯಂತಿ ಉತ್ಸವವನ್ನು ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಿಗದಿಯ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ, ಲೇಖಕ ಡಾ.ಶ್ರೀಧರ ಹೆಗಡೆ ಭದ್ರನ್ ಅವರು ಮಾತನಾಡಿ, ರಾಜಾ ಲಖಮಗೌಡರ ಪರಿಚಯದ ಜತೆಗೆ ಅವರ ದಾನಗುಣವನ್ನು ವಿವರಿಸಿದರು. ನಮ್ಮ ಸಂಸ್ಕೃತಿಯಲ್ಲಿ ದಾನಕ್ಕೆ ಇರುವ ಮಹತ್ವವನ್ನು ಉದ್ಧಾಲಕ ಮತ್ತು ನಚಿಕೇತರ ಕಥೆ ಹಾಗೂ ಶರಣರ ವಚನಗಳ ಮೂಲಕ ವಿವರಿಸಿದರು.

ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಲ್.ವಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ.ಜ್ಯೋತಿ  ಕವಳೇಕರ  ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ. ಸಂಸ್ಥೆಯ ಆಜೀವ ಸದಸ್ಯ ಎಸ್.ಜಿ. ನಂಜಪ್ಪನವರ, ಡಾ. ಸತೀಶ ಎಂ.ಪಿ.,  ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಸಿ. ಕಾಮಗೋಳ ಮತ್ತು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ವಿಜಯಕುಮಾರ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.  

ಕನ್ನಡ ವಿಭಾಗದ ಮುಖ್ಯಸ್ಥೆ ಮಹಾದೇವಿ ಹುಣಶೀಬೀಜ ಪರಿಚಯಿಸಿದರು.  ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಚ್.ಎನ್. ಬನ್ನೂರ ವಂದಿಸಿದರು. ಕು. ಕೀರ್ತನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು.ಪ್ರಗತಿ ಮತ್ತು ಆಯಿಷಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net