ಆರ್​ಕೆಎಂ ವೆಬ್​ಸೈಟ್​ ಬಿಡುಗಡೆ ಮನುಕುಲ ಆರೋಗ್ಯಕ್ಕೆ ಆಯುರ್ವೇದ ಅವಶ್ಯ

RKM website launched Ayurveda is essential for human health
Published on

ವಿಜಯಪುರ : ಆಯುರ್ವೇದ ಜಗತ್ತಿಗೆ ಭಾರತದ ಬಹುದೊಡ್ಡ ಕೊಡುಗೆಯಾಗಿದೆ. ಅದನ್ನು ಜಾಗತಿಕವಾಗಿ ಪಸರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆರ್​ಕೆಎಂ ಆಯುರ್ವೇದ ಆಸ್ಪತ್ರೆಯ ಕಾರ್ಯ ಶ್ಲಾನೀಯ ಎಂದು ಕಾಖಂಡಕಿಯ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.ನಗರದ ಪ್ರತಿಷ್ಠಿತ ಆರ್​ಕೆಎಂ ಆಯುರ್ವೇದ ಆಸ್ಪತ್ರೆಯ ಅಧಿಕೃತ ಅಂತರ್ಜಾಲ ಉದ್ಘಾಟನೆ ಸೋಮವಾರ ನೆರವೇರಿಸಿ ಮಾತನಾಡಿದ ಅವರು, ಆರ್​ಕೆಎಂ ಆಸ್ಪತ್ರೆಯ ಸೌಲಭ್ಯಗಳನ್ನು ವೀಸಿದರು.

ಮನಗೂಳಿಯ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಶಿವಪ್ರಿಯಾನಂದಜೀ ಮಹಾರಾಜ ಮಾತನಾಡಿ, ಆಯುರ್ವೇದವನ್ನು ಆಧುನಿಕ ಯುಗಕ್ಕೆ ಅನುಗುಣವಾಗಿ ಸಂಶೋಧನೆ ಕೈಗೊಳ್ಳುವ ಮೂಲಕ ಮನುಕುಲದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ವೈದ್ಯರಿಗೆ ಸಲಹೆ ನೀಡಿದರು.ತ ವೈದ್ಯೆ ಡಾ. ಪರ್ವೀನ್​ ನದಾಫ ಮಾನಸಿಕ ಕಾಯಿಲೆಗಳ ಕುರಿತು ಲಭ್ಯವಿರುವ ಸೌಲಭ್ಯಗಳ ಕುರಿತು ತಿಳಿಸಿ, ಧರ್ಮಸ್ಥಳದ ಎಸ್​ಡಿಎಂ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಸೇವೆ ಅನುಭವ ಹೊಂದಿದ 6 ಜನ ತ ವೈದ್ಯರನ್ನು ಸದ್ಯ ನಮ್ಮ ಆಸ್ಪತ್ರೆಯಲ್ಲಿ ನೇಮಿಸಲಾಗಿದೆ. ವಿಶೇಷ ಆಯುರ್ವೇದ ಚಿಕಿತ್ಸೆಗಳಿಗೆ ದೂರದ ಕೇರಳ ಮುಂತಾದ ಆಸ್ಪತ್ರೆಗಳಿಗೆ ಅವಲಂಬನೆ ಆರ್​ಕೆಎಂ ಆಯುರ್ವೇದ ಆಸ್ಪತ್ರೆಯು ತಗ್ಗಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಡಾ. ಆರತಿ ಡಿ. ಮಾತನಾಡಿ, ನೂತನ ಅಂತರ್ಜಾಲದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿಸತವಾಗಿ ಮಾಹಿತಿ ನೀಡಿದರು. ಮನೋಆನಂದ ವಿಶೇಷ ಒಪಿಡಿ ಸೇವೆಯನ್ನು ಪರಿಚಯಿಸಲಾಯಿತು. ವಿವಿಧ ೇತ್ರಗಳಲ್ಲಿ ಸಾಧನೆಗೈದ ವಿಜಯರತ್ನ ಪ್ರಶಸ್ತಿ ಪುರಸತ ರಾಜು ಬಿಜ್ಜರಗಿ, ಪ್ರಶಾಂತ ಶೆಟ್ಟಿ, ಉದ್ಯಮರತ್ನ ಪ್ರಶಸ್ತಿ ಪುರಸತ ಶಾಂತೇಶ ಕಳಸಗೊಂಡ, ಮೇಧಾ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ, ಪ್ರಾಚಾರ್ಯ ಡಾ. ಸದಾನಂದ ಜಿಗಜಿನ್ನಿ, ಉದ್ಯಮಿ ಮಹಾಂತೇಶ ಬಿಜ್ಜರಗಿ, ಉದಯಕುಮಾರ ಮತ್ತಿತರರಿದ್ದರು.

ಫೋಟೋ : ಎಂಎಂ 9&6

ವಿಜಯಪುರದ ಆರ್​ಕೆಎಂ ಆಯುರ್ವೇದ ಆಸ್ಪತ್ರೆಯ ಅಧಿಕೃತ ಅಂತರ್ಜಾಲ ಸೇವೆಯ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಿವಯೋಗೀಶ್ವರ ಸ್ವಾಮೀಜಿ, ಶಂಭುಲಿಂಗಯ್ಯ ಕರ್ಪೂರಮಠ, ರಾಜು ಬಿಜ್ಜರಗಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net